ಪ್ರೊ ಕಬಡ್ಡಿ 2018: ಯುಪಿ ಯೋಧ ವಿರುದ್ಧ ತೆಲುಗು ಟೈಟಾನ್ಸ್ ಗೆ ಜಯ

ಸೋನಿಪತ್, ಅಕ್ಟೋಬರ್ 13: ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 13ನೇ ಪಂದ್ಯವಾಗಿ ಯುಪಿ ಯೋಧ ಮತ್ತು ತೆಲುಗು ಟೈಟಾನ್ಸ್ ಮುಖಾಮುಖಿಯಲ್ಲಿ ತೆಲುಗು ಟೈಟಾನ್ಸ್ 31-29ರ ಜಯ ಸಾಧಿಸಿದೆ. ಟೈಟಾನ್ಸ್ ಆಲ್ ರೌಂಡರ್ ಆಟ ತಂಡಕ್ಕೆ ಗೆಲುವನ್ನು ತಂದಿತು.
ಪಂದ್ಯಾರಂಭದಿಂದಲೂ ತೆಲುಗು ಟೈಟಾನ್ಸ್ ದಾಳಿಯಾತ್ಮಕ ಆಟದಿಂದ ಮುನ್ನಡೆಯಲ್ಲೇ ಸಾಗಿತು. ಅದರಲ್ಲೂ ರಾಹುಲ್ ಚೌಧರಿ ಆಕರ್ಷಕ ಆಟದ ಮೂಲಕ ಗಮನ ಸೆಳೆದರು. ಯೋಧ ಪರ ನಾಯಕ ರಿಶಾಂಕ್ ದೇವಾಡಿಗ ಕೊಸರಾಡಿದರೂ ಫಲಿತಾಂಶವನ್ನು ಒಲಿಸಿಕೊಳ್ಳಲಾಗಲಿಲ್ಲ.
ತೆಲುಗು ಟೈಟಾನ್ಸ್ ಪ್ರಮುಖ ಬಲವಾಗಿ ಕಂಡುಬಂದ ರಾಹುಲ್ ಚೌಧರಿ ಬೆಸ್ಟ್ ರೈಡರ್ (9 ಪಾಯಿಂಟ್ ಗಳು) ಪ್ರಶಸ್ತಿ ಪಡೆದುಕೊಂಡರು. ಟೈಟಾನ್ಸ್ ಮತ್ತೊಬ್ಬ ಆಟಗಾರ ಅಬೋಝರ್ ಮಿಘಾನಿ ಬೆಸ್ಟ್ ಟ್ಯಾಕ್ಲ್ ಗಾಗಿ (6 ಟ್ಯಾಕ್ಲ್ ಪಾಯಿಂಟ್) ಪ್ರಶಸ್ತಿ ತನ್ನದಾಗಿಸಿಕೊಂಡರು.
Story first published: Saturday, October 13, 2018, 21:36 [IST]
Other articles published on Oct 13, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications