ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್ಸ್ ಎದುರು ಯು ಮುಂಬಾ ಗೆ ಜಯ

ಸೋನಿಪತ್, ಅಕ್ಟೋಬರ್ 17: ಹರಿಯಾಣದ ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 20ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಯು ಮುಂಬಾ 42-32ರ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ 13 ಪಾಯಿಂಟ್ಸ್ ಗಳೊಂದಿಗೆ ಪಾಯಿಂಟ್ ಟೇಬಲ್ ನಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಪಂದ್ಯಾರಂಭದಲ್ಲಿ ಹರ್ಯಾಣವೆ ಮೇಲುಗೈ ಸಾಧಿಸಿತ್ತು. ಆದರೆ ಅದಾಗಿ ಮರುಕ್ಷಣವೇ ಮುಂಬೈ ಅಂಕ ಕದಿಯಲಾರಂಭಿಸಿತು. ಮತ್ತೆ ಮುಂಬೈ ಅಂಕವನ್ನು ಬಿಟ್ಟುಕೊಡಲಿಲ್ಲ, ಮುನ್ನಡೆಯಲ್ಲೇ ಮುಂದುವರೆಯಿತು. ತವರಿನಲ್ಲಿ ನಡೆದ ಪಂದ್ಯವಾದ್ದರಿಂದ ಹರ್ಯಾಣ ಗೆಲುವಿಗಾಗಿ ಹೊಯ್ದಾಡಿತಾದರೂ ಗೆಲುವು ತಂದುಕೊಳ್ಳಲಾಗಲಿಲ್ಲ.
ಅಂಕಪಟ್ಟಿಯಲ್ಲಿ ಮುಂಬೈ 3ರಲ್ಲಿ 2 ಜಯ, 1 ಪಂದ್ಯ ಟೈ ಮಾಡಿಕೊಂಡಿದ್ದರೆ, ಹರ್ಯಾಣ 5ರಲ್ಲಿ 1 ಗೆಲುವನ್ನಷ್ಟೇ ಪಡೆದು 6 ಅಂಕಗಳಿಂದ 5ನೇ ಸ್ಥಾನದಲ್ಲಿದೆ. ಹರ್ಯಾಣದ ಪರ್ವೀಣ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ (4 ಟ್ಯಾಕ್ಲ್ ಪಾಯಿಂಟ್ಸ್) ಪಡೆದರೆ, ಮುಂಬೈಯ ಸಿದ್ಧಾರ್ಥ್ ದೇಸಾಯ್ 15 ರೈಡಿಂಗ್ ಪಾಯಿಂಟ್ ಗಳೊಂದಿಗೆ ಸ್ಟೈಲಿಷ್ ಪ್ಲೇಯರ್ ಎನಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications