ಪ್ರೊ ಕಬಡ್ಡಿ 2018: ತೆಲುಗು ಟೈಟಾನ್ಸ್ ವಿರುದ್ಧ ಯು ಮುಂಬಾ ಜಯಭೇರಿ

ಪುಣೆ, ಅಕ್ಟೋಬರ್ 23: ಪುಣೆಯ ಶ್ರೀ ಛತ್ರಪತಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬಲಿಷ್ಟ ಯು ಮುಂಬಾ ತಂಡ 41-20ರ ಗೆಲುವು ಸಾಧಿಸಿದೆ. ಇದು ಟೂರ್ನಿಯಲ್ಲಿ ಮುಂಬೈಯ ನಾಲ್ಕನೇ ಗೆಲುವು.
ಪಂದ್ಯದ ಆರಂಭದಿಂದಲೂ ಮುನ್ನಡೆ ಕಾದಿರಿಕೊಂಡ ಮುಂಬೈ, ಟೈಟಾನ್ಸ್ ಗೆ ಸೋಲುಣಿಸಿತು. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಆಕರ್ಷಕ ಆಟವಾಡಿದರು. ರೈಡಿಂಗ್ ನಲ್ಲಿ ಮಿಂಚಿದ ಸಿದ್ಧಾರ್ಥ್ ಒಟ್ಟು 14 (+3 ಬೋನಸ್) ಪಾಯಿಂಟ್ ಗಳನ್ನು ತಂಡಕ್ಕೆ ಸೇರಿಸಿದರು. ಟೈಟಾನ್ಸ್ ನ ರಾಹುಲ್ ಚೌಧರಿ 700 ಪಾಯಿಂಟ್ಸ್ ಗಳನ್ನು ಗಳಿಸಿದ ಸಾಧನೆ ಮೆರೆದರು.
ಯು ಮುಂಬಾದ ಫಝಲ್ ಅಟ್ರಾಚಲಿ 4 ಟ್ಯಾಕ್ಲ್ ಪಾಯಿಂಟ್ ಸೇರಿಸಿದ್ದೂ ಮುಂಬೈ ಗೆಲುವಿಗೆ ಕಾರಣವಾಯ್ತು. ಈ ಪಂದ್ಯದ ಬಳಿಕ ಮುಂಬೈ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, ಒಂದು ಸೋಲು ಮತ್ತೊಂದು ಪಂದ್ಯ ಟೈ ಮಾಡಿಕೊಂಡಿದೆ. ಟೈಟಾನ್ಸ್ 5ರಲ್ಲಿ ಮೂರು ಪಂದ್ಯ ಗೆದ್ದಂತಾಗಿದೆ.
Story first published: Tuesday, October 23, 2018, 22:13 [IST]
Other articles published on Oct 23, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications