ಪ್ರೊ ಕಬಡ್ಡಿ 2018: ಹರ್ಯಾಣ ಸ್ಟೀಲರ್ಸ್ ಸೋಲಿಸಿದ ಯುಪಿ ಯೋಧ

ನವದೆಹಲಿ, ಡಿಸೆಂಬರ್ 6: ದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ (ಡಿಸೆಂಬರ್ 6) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಯುಪಿ ಯೋಧ 30-29ರ ರೋಚಕ ಜಯ ಸಾಧಿಸಿದೆ. ಹರ್ಯಾಣ ಸ್ಟೀಲರ್ಸ್‌ಗೆ ಇನ್ನು ಪ್ಲೇ-ಆಫ್ ಪ್ರವೇಶ ದೂರದ ಮಾತಾಗಿದೆ.
ಇತ್ತಂಡಗಳ ಕಾದಾಟದ ವೇಳೆ ಯುಪಿ ಯೋಧ ತಂಡದ ಪರವಾಗಿ ಶ್ರೀಕಾಂತ್ ಜಾಧವ್ 8, ಪ್ರಶಾಂತ್ ಕುಮಾರ್ ರೈ 8, ಸಚಿನ್ ಕುಮಾರ್ 6 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು. ಹರ್ಯಾಣ ಸ್ಟೀಲರ್ಸ್ ಪರ ಮೋನು ಗೋಯಟ್ ಹೋರಾಟ ವ್ಯರ್ಥಗೊಂಡಂತಾಯಿತು. ಗೋಯಟ್ 11 ಪಾಯಿಂಟ್ ತುಂಬಿ ತಂಡವನ್ನು ಗೆಲ್ಲಿಸಲು ಕೊಸರಾಡಿದರು.
ಈ ಪಂದ್ಯದ ಬಳಿಕ ಹರ್ಯಾಣ ಸ್ಟೀಲರ್ಸ್ 18ರಲ್ಲಿ 6 ಗೆಲುವಿನೊಂದಿಗೆ ಎ ಝೋನ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 18ರಲ್ಲಿ 13 ಪಂದ್ಯ ಗೆದ್ದಿರುವ ಯು ಮುಂಬಾ ಅಗ್ರ ಸ್ಥಾನದಲ್ಲಿ, ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ಅನಂತರದ ಸ್ಥಾನಗಳಲ್ಲಿವೆ. ಝೋನ್ ಬಿ ಅಂಕಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
Story first published: Thursday, December 6, 2018, 21:55 [IST]
Other articles published on Dec 6, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications