For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಯುಪಿ ಯೋಧ ವಿರುದ್ಧ ತಮಿಳ್ ತಲೈವಾಸ್ ಗೆ ಭರ್ಜರಿ ಜಯ

Pro Kabaddi 2018: UP Yoddha defeated by Tamil Thalaivas

ಲಕ್ನೋ, ನವೆಂಬರ್ 2: ಉತ್ತರಪ್ರದೇಶದ ಶಾಹೀದ್ ವಿಜಯ್ ಸಿಂಗ್ ಪಾಠಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ (ನವೆಂಬರ್ 2) ನಡೆದ ಪ್ರೊ ಕಬಡ್ಡಿ 44ನೇ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ತಮಿಳ್ ತಲೈವಾಸ್ 46-24ರ ಭರ್ಜರಿ ಗೆಲುವನ್ನಾಚರಿಸಿದೆ. ಆದರೂ ಅಂಕಪಟ್ಟಿಯಲ್ಲಿ ತಲೈವಾಸ್ ತಳದಲ್ಲೇ ಉಳಿದಿದೆ.

ಪ್ರೊ ಕಬಡ್ಡಿ ಮೈಖೇಲ್ ಮುಖಪುಟ

ತಮಿಳ್ ತಲೈವಾಸ್ ಪರ ಸುಕೇಶ್ ಹೆಗ್ಡೆ ಮತ್ತು ಅಜಯ್ ಠಾಕೂರ್ ತಲಾ 9 ಪಾಯಿಂಟ್ಸ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ಮನ್ಜೀತ್ ಛಿಲ್ಲರ್ 8, ಅಮಿತ್ ಹೂಡಾ 6 ಟ್ಯಾಕ್ಲ್ ಪಾಯಿಂಟ್ಸ್ ಸೇರಿಸಿದ್ದು ತಲೈವಾಸ್ ಎದುರಾಳಿ ವಿರುದ್ಧ ಭರ್ಜರಿ ಗೆಲುವನ್ನಾಚರಿಸಿಲು ನೆರವಾಯಿತು.

ಯುಪಿ ಯೋಧ ಪರ ಪ್ರಶಾಂತ್ ಕುಮಾರ್ ರೈ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದ ಬಳಿಕ ಬಿ ಝೋನ್ ನಲ್ಲಿರುವ ತಮಿಳ್ ತಲೈವಾಸ್ ಆಡಿರುವ 9 ಪಂದ್ಯಗಳಲ್ಲಿ 3ನೇ ಗೆಲುವು ಪಡೆದಂತಾಗಿದೆ. ತಲೈವಾಸ್ ಗೆ ಪ್ರಶಸ್ತಿ ಸುತ್ತಿನ ಪ್ರವೇಶ ಕೊಂಚ ದೂರದ ಮಾತೇ. ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 36-25ರ ಜಯ ಗಳಿಸಿತು.

Story first published: Friday, November 2, 2018, 22:39 [IST]
Other articles published on Nov 2, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+