ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್ಸ್ ಮಣಿಸಿ ಯು ಮುಂಬಾ ಸೆ.ಫೈನಲ್‌ಗೆ ಲಗ್ಗೆ

ಅಹ್ಮದಾಬಾದ್, ಅಕ್ಟೋಬರ್ 14: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಏಕ ಅರೇನ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ಸೋಮವಾರ (ಅಕ್ಟೋಬರ್ 14) ನಡೆದ ನಡೆದ ಪ್ರೊ ಕಬಡ್ಡಿ ಲೀಗ್ 2019ರ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡವನ್ನು 46-38 ಅಂತರದಿಂದ ಮಣಿಸಿರುವ ಯು ಮುಂಬಾ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಆರಂಭದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿ ಆಟದೊಂದಿಗೆ ಸಮಬಲ ಸಾಧಿಸುತ್ತಲೇ ಸಾಗಿದ್ದವು. ಆದರೆ ಪಂದ್ಯ ಮುಂದುವರೆದಂತೆ ಯು ಮುಂಬಾ ಆಟವನ್ನು ಹತೋಟಿಗೆ ತೆಗೆದುಕೊಂಡಿತು. ಮುಂಬಾದ ಅಭಿಷೇಕ್ ಸಿಂಗ್ 16, ಅರ್ಜುನ್ ದೇಸ್ವಾಲ್ 15, ಫಝಲ್ ಅತ್ರಾಚಲಿ 3, ಸರೇಂದರ್ ಸಿಂಗ್ 2, ಸಂದೀಪ್ ನರ್ವಾಲ್ 2 ಅಂಕ ನೀಡಿ ತಂಡವನ್ನು ಬೆಂಬಲಿಸಿದರು.
ಹರ್ಯಾಣ ಸ್ಟೀಲರ್ಸ್‌ನಿಂದ ವಿಕಾಸ್ ಖಂಡೋಲ 13, ಪ್ರಶಾಂತ್ ಕುಮಾರ್ ರೈ 9, ವಿಜಯ್ 9, ಚಂದ್ ಸಿಂಗ್ 2, ಧರ್ಮರಾಜ್ 1, ವಿಕಾಸ್ ಖಾಲೆ 1 ಪಾಯಿಂಟ್ ಸೇರಿಸಿದರು. ಅಕ್ಟೋಬರ್ 16ರಂದು ನಡೆಯುವ ಸೆಮಿಫೈನಲ್‌ನಲ್ಲಿ ಯು ಮುಂಬಾ ತಂಡ ಬೆಂಗಾಲ್ ವಾರಿಯರ್ಸ್ ಎದುರು ಕಾದಾಡಲಿದೆ. ಬೆಂಗಳೂರು ತಂಡ ಡೆಲ್ಲಿ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications