For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ಬೆಂಗಾಲ್ ವಾರಿಯರ್ಸ್‌ಗೆ ಶರಣಾದ ಬೆಂಗಳೂರು ಬುಲ್ಸ್

Pro Kabaddi 2019: Bengal Warriors beat Bengaluru Bulls by 42-40

ಕೋಲ್ಕತ್ತ, ಸೆಪ್ಟೆಂಬರ್ 12: ಪವನ್ ಕುಮಾರ್ ವಿರೋಚಿತ ಹೋರಾಟದ ಹೊರತಾಗಿಯೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಸೋತಿದೆ. ಕೋಲ್ಕತ್ತಾದ ನೇತಾಜಿ ಶುಭಾಶ್ಚಂದ್ರ ಬೋಸ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 12) ನಡೆದ ಪ್ರೊ ಕಬಡ್ಡಿ ಲೀಗ್ 88ನೇ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಬೆಂಗಳೂರು 42-40ರ ಹಿನ್ನಡೆ ಅನುಭವಿಸಿತು.

ಪ್ರೊ ಕಬಡ್ಡಿ ಲೀಗ್ 2019ರ ಫಲಿತಾಂಶ, ವೇಳಾಪಟ್ಟಿ, ಪಾಯಿಂಟ್ ಟೇಬಲ್ ಇಲ್ಲಿದೆ

ಬೆಂಗಳೂರು ಬುಲ್ಸ್‌ನಿಂದ ಪವನ್ ಕುಮಾರ್ 19 (16 ರೈಡ್, 3 ಬೋನಸ್), ಸುಮಿತ್ ಸಿಂಗ್ 7, ಸೌರಭ್ ನಂದಲ್ 3, ಅಂಕಿತ್ 2, ರೋಹಿತ್ ಕುಮಾರ್ 2, ಅಮಿತ್ ಶಿಯೋರಾನ್ 1 ಅಂಕ ಸೇರಿಸಿ ತಂಡದ ಗೆಲುವಿಗಾಗಿ ಕೊಸರಾಡಿದರು.

ಬೆಂಗಾಲ್ ವಾರಿಯರ್ಸ್‌ನಿಂದ ನಾಯಕ ಮಣೀಂದರ್ ಸಿಂಗ್ 17, ಇಸ್ಮಾಯಿಲ್ ನಬಿಬಖ್ಷ್ 9, ಸುಕೇಶ್ ಹೆಗ್ಡೆ 5, ಬಲ್‌ದೇವ್ ಸಿಂಗ್ 2, ಆದರ್ಶ್ ಟಿ 2, ಜೀವ ಕುಮಾರ್ 1, ಕೆ ಪ್ರಪಂಜನ್ 1 ಪಾಯಿಂಟ್‌ ಸೇರಿಸಿ ತಂಡದ ಗೆಲುವನ್ನು ಬರೆದರು.

ಈ ಪಂದ್ಯದ ಮುಕ್ತಾಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (59 ಪಾಯಿಂಟ್ಸ್), ಬೆಂಗಾಲ್ ವಾರಿಯರ್ಸ್ (58), ಹರ್ಯಾಣ ಸ್ಟೀಲರ್ಸ್ (49), ಬೆಂಗಳೂರು ಬುಲ್ಸ್ (49) ಮತ್ತು ಯು ಮುಂಬಾ (43) ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿವೆ.

Story first published: Thursday, September 12, 2019, 22:26 [IST]
Other articles published on Sep 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+