ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್ಸ್ ಸೋಲಿಸಿದ ಬೆಂಗಾಲ್ ವಾರಿಯರ್ಸ್

ಪುಣೆ, ಸೆಪ್ಟೆಂಬರ್ 20: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್‌ನಲ್ಲಿ ಗುರುವಾರ (ಸೆಪ್ಟೆಂಬರ್ 19) ನಡೆದ ಪ್ರೊ ಕಬಡ್ಡಿ ಲೀಗ್ 97ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 48-36ರ ಗೆಲುವು ಸಾಧಿಸಿದೆ. ಮಣೀಂದರ್ ಸಿಂಗ್ ಅವರ ಚತುರ ಆಟ ವಾರಿಯರ್ಸ್‌ಗೆ ಗೆಲುವು ತಂದಿತು.
ಬೆಂಗಾಲ್ ವಾರಿಯರ್ಸ್‌ನಿಂದ ಮಣೀಂದರ್ ಸಿಂಗ್ 18 (16 ರೈಡ್, 2 ಬೋನಸ್), ಕೆ ಪ್ರಪಂಜನ್ 7, ಬಲ್‌ದೇವ್ ಸಿಂಗ್ 6, ಇಸ್ಮಾಯಿಲ್ ನಬಿಬಖ್ಷ್ 5, ರಿಂಕು ನರ್ವಾಲ್ 3, ಜೀವ ಕುಮಾರ್ 2 ಅಂಕ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದರು.
ಹರ್ಯಾಣ ಸ್ಟೀಲರ್ಸ್‌ನಿಂದ ವಿನಯ್ 14 (9 ರೈಡ್, 5 ಬೋನಸ್), ವಿಕಾಸ್ ಖಂಡೋಲಾ 9, ನವೀನ್ 5, ವಿಕಾಸ್ ಖಾಲೆ 3, ರವಿ ಕುಮಾರ್ 2, ಪ್ರಶಾಂತ್ ಕುಮಾರ್ 1 ಅಂಕ ಸೇರಿಸಿ ಎದುರಾಳಿಗೆ ಪೈಪೋಟಿ ನೀಡಿದರು. ಅಂಕಪಟ್ಟಿಯಲ್ಲೀಗ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಹರ್ಯಾಣ ಸ್ಟೀಲರ್ಸ್, ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಮೊದಲ ಐದು ಸ್ಥಾನಗಳಲ್ಲಿವೆ.
Story first published: Thursday, September 19, 2019, 23:25 [IST]
Other articles published on Sep 19, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications