For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಸೋಲುವ ಪಂದ್ಯ ಗೆದ್ದು ಪಲ್ಟಾನ್ ದಂಗುಬಡಿಸಿದ ವಾರಿಯರ್ಸ್

Pro Kabaddi 2019: Bengal Warriors beat Puneri Paltan

ಕೋಲ್ಕತ್ತ, ಸೆಪ್ಟೆಂಬರ್ 9: ಇಸ್ಮಾಯಿಲ್ ನಬಿಬಖ್ಷ್ ಅವರ 5 ಪಾಯಿಂಟ್‌ಗಳ ರೈಡ್‌ನಿಂದ ಬೆಂಗಾಲ್ ವಾರಿಯರ್ಸ್, ಸೋಲುವ ಪಂದ್ಯವನ್ನು ಗೆದ್ದು ಪುಣೇರಿ ಪಲ್ಟಾನ್ ತಂಡವನ್ನು ದಂಗುಬಡಿಸಿದೆ. ಭಾನುವಾರ (ಸೆಪ್ಟೆಂಬರ್ 8) ಕೋಲ್ಕತ್ತಾದ ಸುಭಾಶ್ಚಂದ್ರ ಬೋಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 81ನೇ ಪಂದ್ಯದಲ್ಲಿ ಪಲ್ಟಾನ್ ವಿರುದ್ಧ ವಾರಿಯರ್ಸ್ 42-39ರ ರೋಚಕ ಜಯ ಗಳಿಸಿದೆ.

ಪುಣೇರಿ ಪಲ್ಟಾನ್ ಮುನ್ನಡೆಯೊಂದಿಗೆ ಆಟ ಆರಂಭಿಸಿತ್ತು. ಪಂದ್ಯದ ಮಧ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಕೂಡ ಫೈಪೋಟಿಯೊಂದಿಗೆ ಅಂಕವನ್ನು ಸರಿದೂಗಿಸಿಕೊಂಡಿತ್ತು. ಪಂದ್ಯದ ದ್ವಿತೀಯಾರ್ಧದಲ್ಲಿ ಭಾರೀ ಮುನ್ನಡೆಯಲ್ಲಿದ್ದ ಪುಣೆ ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ ಇಸ್ಮಾಯಿಲ್ ಅವರ 5 ಅಂಕದ ರೈಡ್ ಬೆಂಗಾಲ್ ತಂಡಕ್ಕೆ ಗೆಲುವು ತಂದಿತು.

ಬೆಂಗಾಲ್ ಪರ ಮಣೀಂದರ್ ಸಿಂಗ್ 9, ಇಸ್ಮಾಯಿಲ್ 6, ಸುಕೇಶ್ ಹೆಗ್ಡೆ 6, ಕೆ ಪ್ರಪಂಜನ್ 5, ಬಲ್‌ದೇವ್ ಸಿಂಗ್ 5, ಮಯೂರ್ 2, ರಿಂಕು ನರ್ವಾಲ್ 2 ಅಂಕ ಸೇರಿಸಿ ಗೆಲುವಿಗೆ ಕಾರಣರಾದರೆ, ಪುಣೆ ಪರ ಪಂಕಜ್ ಮೋಹಿತೆ 11, ಮನ್ಜೀತ್ 10, ಹಾದಿ ತಾಜಿಕ್ 3, ಗಿರಿಶ್ ಎರ್ನಾಕ್ 3, ಸಿಜಿತ್ ಸಿಂಗ್ 2, ದರ್ಶನ್ ಕಡಿಯಾನ್ 2 ಅಂಕ ಸೇರಿಸಿ ಜಿದ್ದಾಜಿದ್ದಿಗೆ ಕಾರಣರಾದರು.

ಈ ಪಂದ್ಯದ ಮುಕ್ತಾಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ಹರ್ಯಾಣ ಸ್ಟೀಲರ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್ ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ.

Story first published: Sunday, September 8, 2019, 23:41 [IST]
Other articles published on Sep 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+