Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗಾಲ್ ವಾರಿಯರ್ಸ್ vs ದಬಾಂಗ್ ಡೆಲ್ಲಿ ರೋಚಕ ಪಂದ್ಯ ಸಮಬಲ

Pro Kabaddi 2019: Bengal Warriors vs Dabang Delhi match tied

ಚೆನ್ನೈ, ಆಗಸ್ಟ್ 17: ಪ್ರೊ ಕಬಡ್ಡಿ ಲೀಗ್ 46ನೇ ರೋಚಕ ಪಂದ್ಯ ಸಮಬಲದೊಂದಿಗೆ ಅಂತ್ಯ ಕಂಡಿತು. ಬೆಂಗಾಲ್ ವಾರಿಯರ್ಸ್ vs ದಬಾಂಗ್ ಡೆಲ್ಲಿ ನಡುವಣ ಜಿದ್ದಾ ಜಿದ್ದಿ ಕಾಳಗದಲ್ಲಿ ಎರಡೂ ತಂಡಗಳು 30-30ರ ಸಮಬಲ ಸಾಧಿಸಿದವು. ಈ ಪಂದ್ಯದ ಬಳಿಕ ದಬಾಂಗ್ ಡೆಲ್ಲಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೇ ಮುಂದುವರೆದಿದೆ.

ಆರಂಭದಿಂದಲೂ ಜಿದ್ದಾಜಿದ್ದಿಯಲ್ಲೇ ಸಾಗಿದ ಬೆಂಗಾಲ್ ವಾರಿಯರ್ಸ್-ದಬಾಂಗ್ ಡೆಲ್ಲಿ ಪಂದ್ಯದಲ್ಲಿ ಬೆಂಗಾಲ್ ಪರ ಕೆ ಪ್ರಪಂಜನ್ 10, ಜೀವ ಕುಮಾರ್ 4 ಪಾಯಿಂಟ್ ಸೇರಿಸಿ ಮತ್ತು ಡೆಲ್ಲಿ ಪರ ನವೀನ್ ಕುಮಾರ್ 11, ಚಂದ್ರನ್ ರಂಜಿತ್ 6, ಜೋಗೀಂದರ್ ಸಿಂಗ್ ನರ್ವಾಲ್ 4 ಅಂಕ ಸೇರಿಸಿ ಸಮಬಲ ಹೋರಾಟಕ್ಕೆ ಪ್ರಮುಖ ಕಾರಣರಾದರು.

45ನೇ ಪಂದ್ಯದ ಮುಕ್ತಾಯದ ನಂತರ ಜೈಪುರ್ ಪಿಂಕ್ ಪ್ಯಾಂಥರ್ಸ್ ಬಳಿಕ ಬೆಂಗಳೂರು ಬುಲ್ಸ್ ಪಾಯಿಂಟ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿತ್ತು. ಆದರೆ 46ನೇ ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಮತ್ತೆ ಏರುಪೇರಾಗಿದೆ. ಸದ್ಯ ಜೈಪುರ್, ಡೆಲ್ಲಿ, ಬೆಂಗಾಲ್, ಬೆಂಗಳೂರು ಮತ್ತು ಮುಂಬೈ ಮೊದಲ 5 ಸ್ಥಾನಗಳಲ್ಲಿವೆ.

Story first published: Saturday, August 17, 2019, 22:20 [IST]
Other articles published on Aug 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+