Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಪಿ ಯೋಧ ಕೆಡವಿ ಸೆಮಿಫೈನಲ್‌ಗೆ ಪ್ರವೇಶಿಸಿದ ಬೆಂಗಳೂರು ಬುಲ್ಸ್

Pro Kabaddi 2019: Bengaluru Beat UP 48-45 in Extra-Time

ಅಹ್ಮದಾಬಾದ್, ಅಕ್ಟೋಬರ್ 14: ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ 2019ರ ಪ್ರೊ ಕಬಡ್ಡಿ ಲೀಗ್ ಸೀಸನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೋಮವಾರ (ಅಕ್ಟೋಬರ್ 14) ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಯುಪಿ ಯೋಧವನ್ನು 48-45ರ ಅಂತರದಿಂದ ಸೋಲಿಸಿತು.

ಆಟದ ಎಂದಿನ ಅವಧಿಯಲ್ಲಿ ಇತ್ತಂಡಗಳು ಸಮಬಲ ಸಾಧಿಸಿದಾಗ ಹೆಚ್ಚಿನ ಕಾಲಾವಧಿ ನೀಡಲಾಗಿತ್ತು. ಈ ವೇಳೆ ಬೆಂಗಳೂರು ಬುಲ್ಸ್ ಟಾಪ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಚತುರ ಆಟ ಹಾಲಿ ಚಾಂಪಿಯನ್ನರ ಪ್ರಶಸ್ತಿ ಕನಸನ್ನು ಜೀವಂತವಾಗಿರಿಸಿದೆ.

ಬೆಂಗಳೂರಿನಿಂದ ಪವನ್ ಕುಮಾರ್ 20 (18 ರೈಡ್, 2 ಬೋನಸ್), ಸುಮಿತ್ ಸಿಂಗ್ 7, ಮಣೀಂದರ್ ಸಿಂಗ್ 4, ರೋಹಿತ್ ಕುಮಾರ್ 3, ಅಮಿತ್ ಶಿಯೋರನ್ 2, ಸೌರಬ್ ನಂದಲ್ 2 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು. ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಕಾದಾಡಲಿವೆ.

ಯುಪಿ ಯೋಧಾದಿಂದ ರಿಶಾಂಕ್ ದೇವಾಡಿಗ 11, ಶ್ರೀಕಾಂತ್ ಜಾಧವ್ 9, ನಿತೇಶ್ ಕುಮಾರ್ 5, ಸುಮಿತ್ 5, ಸುರೇಂದರ್ ಗಿಲ್ 5, ಮೋನು ಗೋಯಟ್ 5, ಅಮಿತ್ 1, ಅಶು ಸಿಂಗ್ 1 ಅಂಕ ಸೇರಿಸಿ ಭರ್ಜರಿ ಪೈಟೋಟಿಗೆ ಕಾರಣರಾದರು.

Story first published: Monday, October 14, 2019, 21:36 [IST]
Other articles published on Oct 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+