ಪ್ರೊ ಕಬಡ್ಡಿ: ಪವನ್ ದಾಖಲೆ ರೈಡ್, ಸ್ಟೀಲರ್ಸ್‌ಗೆ ಗುದ್ದಿದ ಬೆಂಗಳೂರು ಬುಲ್ಸ್!

ಪಂಚಕುಲ, ಅಕ್ಟೋಬರ್ 2: ಸೂಪರ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಫುಲ್ ಚಾರ್ಚ್ ಆಟದಿಂದಾಗಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 59-36ರ ಗೆಲುವು ದಾಖಲಿಸಿದೆ. ಇದರೊಂದಿಗೆ ಬೆಂಗಳೂರು ಬುಲ್ಸ್ ಈ ಪ್ರೊ ಕಬಡ್ಡಿ ಸೀಸನ್‌ನಲ್ಲಿ ಕ್ವಾಲಿಫೈಯರ್‌ಗೆ ಪ್ರವೇಶಿಸಿದೆ.
ಹರ್ಯಾಣದ ಪಂಚಕುಲದಲ್ಲಿರುವ ತೌ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ (ಅಕ್ಟೋಬರ್ 2) ನಡೆದ 118ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಹೀರೋ ಆಗಿ ಮಿಂಚಿದರು.
ಅಲ್ಲದೆ ಈ ಸೀಸನ್‌ನಲ್ಲಿ ಅತೀ ಹೆಚ್ಚು ರೈಡಿಂಗ್ ಪಾಯಿಂಟ್ ಹೊಂದಿದ್ದ ಪಾಟ್ನಾ ಪೈರೇಟ್ಸ್ ಟಾಪ್ ರೈಡರ್ ಪರ್ದೀಪ್ ನರ್ವಾಲ್ ಹೆಸರಿನಲ್ಲಿದ್ದ ದಾಖಲೆಯನ್ನು ಪವನ್ ಸರಿಗಟ್ಟಿದ್ದಾರೆ.

ಪವನ್ ವೀರೋಚಿತ ಆಟ
ಪಂದ್ಯದ ಆರಂಭದಿಂದಲೂ ಕಿಂಚಿತ್ತೂ ಅಂಜಿಕೆಯಿಲ್ಲದೆ ರೈಡಿಂಗ್ ಪಾಯಿಂಟ್ಸ್ ಕದಿಯಲಾರಂಭಿಸಿದ ಪವನ್ ಕುಮಾರ್ ಶೆಹ್ರಾವತ್ ಬರೋಬ್ಬರಿ 39 ಅಂಕಗಳನ್ನು ಕಲೆ ಹಾಕಿದರು. ಇದರಲ್ಲಿ 34 ರೈಡಿಂಗ್, 5 ಬೋಸನ್ ಪಾಯಿಂಟ್‌ಗಳು ಸೇರಿವೆ. ಈ ಮೂಲಕ ಪವನ್ ದಾಖಲೆ ಸರದಾರನಾಗಿ ಗಮನ ಸೆಳೆದರು.

ಬುಲ್ಸ್‌ನಿಂದ ಚಾಂಪಿಯನ್ ಆಟ
ಬೆಂಗಳೂರಿನಿಂದ ಪವನ್ ಬಿಟ್ಟರೆ ಮಣೀಂದರ್ ಸಿಂಗ್ 4, ಸೌರಭ್ ನಂದಲ್ 2, ಅಮಿತ್ ಶಿಯೋರಾನ್ 2, ಅಂಕಿತ್ 1, ಸುಮಿತ್ ಸಿಂಗ್ 1 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು. ಅಂತೂ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಬೆಂಗಳೂರು ಚಾಂಪಿಯನ್ ಆಟ ನೀಡಿತು.

ಪರ್ದೀಪ್ ದಾಖಲೆ ಬದಿಗೆ
ಪ್ರೊ ಕಬಡ್ಡಿ ಲೀಗ್ 2019ರಲ್ಲಿ ಇಲ್ಲೀವರೆಗೆ ಪಂದ್ಯವೊಂದರಲ್ಲಿ ಅತೀ ಹೆಚ್ಚು ರೈಡಿಂಗ್ ಪಾಯಿಂಟ್ ಗಳಿಸಿದ್ದ ದಾಖಲೆ ಪಾಟ್ನಾ ಪೈರೇಟ್ಸ್‌ನ ಪರ್ದೀಪ್ ನರ್ವಾಲ್ ಹೆಸರಿನಲ್ಲಿತ್ತು. ಪರ್ದೀಪ್ ಒಟ್ಟು 34 ರೈಡಿಂಗ್ ಪಾಯಿಂಟ್‌ನೊಂದಿಗೆ ಈ ದಾಖಲೆ ಹೊಂದಿದ್ದರು. ಈಗ 39 ರೈಡಿಂಗ್ ಪಾಯಿಂಟ್‌ನೊಂದಿಗೆ ಪವನ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

ಕೊಸರಾಡಿದ ಪ್ರಶಾಂತ್
ಹರ್ಯಾಣ ಸ್ಟೀಲರ್ಸ್‌ನಿಂದ ಪ್ರಶಾಂತ್ ಕುಮಾರ್ 17, ವಿಕಾಸ್ ಖಂಡೋಲಾ 6, ವಿನಯ್ 5, ನವೀನ್ 3, ರವಿ ಕುಮಾರ್ 1, ಸುನಿಲ್ 1, ಧರ್ಮರಾಜ್ 1 ಅಂಕ ಸೇರಿಸಿ ಎದುರಾಳಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿದರು. ಪಾಯಿಂಟ್ ಟೇಬಲ್‌ನಲ್ಲಿ ಈಗ ಡೆಲ್ಲಿ, ಬೆಂಗಾಲ್, ಹರ್ಯಾಣ, ಯು ಮುಂಬಾ, ಬೆಂಗಳೂರು ಕ್ವಾಲಿಫೈಯರ್‌ಗೆ ಪ್ರವೇಶಿಸಿವೆ. ಯುಪಿ ಯೋಧಕ್ಕೆ ಇನ್ನೂ 2 ಲೀಗ್ ಪಂದ್ಯಗಳಿದ್ದು ಅದೂ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications