Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಗುದ್ದಿ ಕೆಡವಿದ ಬೆಂಗಳೂರು ಬುಲ್ಸ್!

Pro Kabaddi 2019: Bengaluru Bulls beat Patna Pirates

ಹೈದರಾಬಾದ್, ಜುಲೈ 20: ಪ್ರೊ ಕಬಡ್ಡಿ ಲೀಗ್ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಶುಭಾರಂಭ ಕಂಡಿದೆ. ಹೈದರಾಬಾದ್‌ನ ಗಚಿಬೌಲಿ ಇಂಡೋರ್‌ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 20) ನಡೆದ ಪ್ರೊ ಕಬಡ್ಡಿ ಲೀಗ್ 2019ರ 2ನೇ ಕುತೂಹಲಕಾರಿ ಕದನದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ 34-32 ಅಂತರದಲ್ಲಿ ಜಯ ಗಳಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ಮುನ್ನಡೆಗಳಿಸಿತ್ತು. ಬೆಂಗಳೂರು 13, ಪಾಟ್ನಾ 16 ಪಾಯಿಂಟ್ ದಾಖಲಿಸಿದ್ದವು. ದ್ವಿತೀಯಾರ್ಧದಲ್ಲಿ ಅಂಕ ಕದಿಯಲಾರಂಭಿಸಿದ ಬುಲ್ಸ್ ಪಂದ್ಯವನ್ನು ಜಿದ್ದಾಜಿದ್ದಿ ಹಂತಕ್ಕೆ ತಂದಿತಲ್ಲದೆ 2 ಪಾಯಿಂಟ್ ಅಂತರದಲ್ಲಿ ಮೇಲುಗೈ ಸಾಧಿಸಿತು.

ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಪವನ್, 9 ರೇಡಿಂಗ್, 1 ಬೋನಸ್ ಸೇರಿ 10 ಪಾಯಿಂಟ್ ಸೇರಿಸಿದರು. ಅಮಿತ್ ಶಿಯೋರಾನ್‌ರಿಂದ 4 ಟ್ಯಾಕ್ಲ್, 1 ಬೋಸನ್ ಪಾಯಿಂಟ್ ಪಾಯಿಂಟ್ ಲಭಿಸಿತು.

ಅಲ್ಲದೆ ಸುಮಿತ್ ಸಿಂಗ್ 4 (1 ರೇಡಿಂಗ್, 1 ಟ್ಯಾಕ್ಲ್‌, 2 ಬೋಸನ್), ಆಶೀಶ್ ಕುಮಾರ್ 4 (2 ಟ್ಯಾಕ್ಲ್‌, 2 ಬೋಸನ್), ಮಹೇಂದರ್ ಸಿಂಗ್ 4 (3 ಟ್ಯಾಕ್ಲ್, 1 ಬೋಸನ್), ರೋಹಿತ್ ಕುಮಾರ್ 3, ಬಂತಿ 2 ಪಾಯಿಂಟ್ಸ್ ಸೇರಿಸಿ ತಂಡಕ್ಕೆ ಬಲ ತುಂಬಿದರು.

ಪಾಟ್ನಾ ಪರ ಪರ್ದೀಪ್ ನರ್ವಾಲ್ ಅತ್ಯುತ್ತಮ ಆಟವಾಡಿದರು. ಪರ್ದೀಪ್ 8 ರೇಡಿಂಗ್, 2 ಬೋನಸ್ ಪಾಯಿಂಟ್ ನೀಡಿದರು. ಇನ್ನು ಮೊಹಮ್ಮದ್ ಇಸ್ಮಾಯಿಲ್ 9, ನೀರಜ್ ಕುಮಾರ್, ವಿಕಾಸ್ ಜಗ್ಲಾನ್ ಮತ್ತು ಹಾದಿ ಒಸ್ತೋರಕ್ ತಲಾ 3, ಲೀ ಜಂಗ್ ಕುನ್ ಮತ್ತು ಜೈದೀಪ್ ತಲಾ 1 ಪಾಯಿಂಟ್ ಸೇರಿಸಿ ಪೈಪೋಟಿಗೆ ಕಾರಣರಾದರು. 6ನೇ ಆವೃತ್ತಿಯಲ್ಲಿ ಗುಜರಾತ್ ಫಾರ್ಚ್ಯೂನ್ ಜೇಂಟ್ಸ್ ವಿರುದ್ಧ ಬೆಂಗಳೂರು 38-33ರ ಗೆಲುವು ದಾಖಲಿಸಿತ್ತು.

Story first published: Saturday, July 20, 2019, 22:30 [IST]
Other articles published on Jul 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+