Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್ 2019: ಪೈರೇಟ್ಸ್ ವಿರುದ್ಧ ಜಿದ್ದಾಜಿದ್ದಿ ಪಂದ್ಯ ಗೆದ್ದ ಬುಲ್ಸ್!

Pro Kabaddi 2019: Bengaluru Bulls beat Patna Pirates in thriller match

ಬೆಂಗಳೂರು, ಸೆಪ್ಟೆಂಬರ್ 4: ಪವನ್ ಕುಮಾರ್ ಶೆಹ್ರಾವತ್ ಮತ್ತು ನಾಯಕ ರೋಹಿತ್ ಕುಮಾರ್ ವೀರೋಚಿತ ಹೋರಾಟದ ನೆರವಿನಿಂದ ಬೆಂಗಳೂರು ಬುಲ್ಸ್ ಮೇಲುಗೈ ಸಾಧಿಸಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 4) ನಡೆದ ಪ್ರೊ ಕಬಡ್ಡಿ ಲೀಗ್ 74ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ 40-39ರ ರೋಚಕ ಗೆಲುವನ್ನಾಚರಿಸಿತು.

ಪಂದ್ಯದ ಆರಂಭದಲ್ಲಿ ಮುನ್ನಡೆಯೊಂದಿಗೆ ಆಟ ಶುರುವಿಟ್ಟುಕೊಂಡ ಬೆಂಗಳೂರು ಬುಲ್ಸ್, ಪಂದ್ಯದ ಮಧ್ಯಭಾಗದಲ್ಲಿ ಭಾರೀ ಅಂತರದ ಹಿನ್ನಡೆಯಲ್ಲಿತ್ತು. ಆದರೆ ಪಂದ್ಯದ ಕೊನೇ ಕ್ಷಣದಲ್ಲಿ ಅಂಕ ಕದಿಯುತ್ತ ಬಂದ ಬುಲ್ಸ್, ಆಟವನ್ನು ಹತೋಟಿಗೆ ತೆಗೆದುಕೊಂಡಿತು. ಈ ಪಂದ್ಯದ ಬಳಿಕ ಬುಲ್ಸ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ.

ಬೆಂಗಳೂರು ಬುಲ್ಸ್ ಬೆಸ್ಟ್ ರೈಡರ್ ಪವನ್ ಕುಮಾರ್ 14 ರೈಡ್, 3 ಬೋನಸ್ ಸೇರಿ ಒಟ್ಟು 17 ಅಂಕಗಳ ಭರ್ಜರಿ ಕೊಡುಗೆ ತಂಡದ ಗೆಲುವನ್ನು ಬರೆಯಿತು. ಜೊತೆಗೆ ರೋಹಿತ್ ಕುಮಾರ್ 7, ಮಹೇಂದರ್ ಸಿಂಗ್ 5, ಸೌರಬ್ ನಂದಲ್ 4, ಅಮಿತ್ ಶಿಯೋರಾನ್ 2 ಅಂಕ ಸೇರಿಸಿ ತಂಡಕ್ಕೆ ಬಲ ತುಂಬಿದರು.

ಪಾಟ್ನಾ ಪೈರೇಟ್ಸ್ ಪರ ಭರ್ಜರಿ ಆಟ ತೋರಿದ ಪರ್ದೀಪ್ ನರ್ವಾಲ್ ಬರೋಬ್ಬರಿ 14 ಪಾಯಿಂಟ್ ಸೇರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತರಲು ಕಾರಣರಾದರು. ಇನ್ನು ಮೊಹಮ್ಮದ್ ಇಸ್ಮಾಯಿಲ್ 6, ಹಾದಿ ಒಶ್ತಾರಕ್ 5, ನೀರಜ್ ಕುಮಾರ್ 4, ಅಮಿತ್ ಕುಮಾರ್ 4 ಅಂಕ ಸೇರಿಸಿ ಪಾಟ್ನಾ ತಂಡ ಬೆಂಬಲಿಸಿದರು.

Story first published: Wednesday, September 4, 2019, 22:28 [IST]
Other articles published on Sep 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+