ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ಜಯಭೇರಿ

ಚೆನ್ನೈ, ಆಗಸ್ಟ್ 17: ಚೆನ್ನೈಯಲ್ಲಿರುವ ಜವಾಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 17) ನಡೆದ ಪ್ರೊ ಕಬ್ಬಡ್ಡಿ ಲೀಗ್ 45ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ 32-21ರ ಜಯ ಗಳಿಸಿದೆ. ಹಿಂದಿನ 2 ಪಂದ್ಯಗಳಲ್ಲಿ ಹರ್ಯಾಣ ಸ್ಟೀಲರ್ಸ್ ಮತ್ತು ಯೂಪಿ ಯೋಧ ವಿರುದ್ಧದ ಸೋತಿದ್ದ ಬುಲ್ಸ್, ತಲೈವಾಸ್ ಎದುರು ಭರ್ಜರಿ ಆಟವಾಡಿತು.
ಪವನ್ ಕುಮಾರ್, ಸೌರಭ್ ನಂದಲ್, ಅಂಕಿತ್ ಮತ್ತು ರೋಹಿತ್ ಕುಮಾರ್ ಹೋರಾಟದ ಫಲವಾಗಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ 8ರಲ್ಲಿ 5ನೇ ಜಯ ದಾಖಲಿಸಿದೆ. ಈ ಗೆಲುವಿನ ಬಳಿಕ ಬುಲ್ಸ್ ಸದ್ಯದ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿಯಿತು. ಇನ್ನು ಆಗಸ್ಟ್ 21ರಂದು ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟಾನ್ ಮಧ್ಯೆ ಸ್ಪರ್ಧೆ ನಡೆಯಲಿದೆ.
ಬೆಂಗಳೂರು ಪರ ಪವನ್ 9 ರೇಡ್, 2 ಬೋನಸ್ ಸೇರಿ ಒಟ್ಟು 11 ಅಂಕಗಳ ಕೊಡುಗೆಯಿತ್ತರು. ಇನ್ನು ಸೌರಭ್ 4 ಟ್ಯಾಕ್ಲ್, 1 ಬೋನಸ್ ಅಂಕ, ಅಂಕಿತ್ 1 ರೇಡ್, 2 ಟ್ಯಾಕ್ಲ್ ಪಾಯಿಂಟ್, ರೋಹಿತ್ 2 ರೇಡ್, ಬಂತಿ 2 ಪಾಯಿಂಟ್‌ನೊಂದಿಗೆ ತಂಡಕ್ಕೆ ಬಲ ತುಂಬಿದರು.
ತಮಿಳ್ ತಲೈವಾಸ್ ಪರ ಅಜಯ್ ಠಾಕೂರ್ 4, ರಣ್ ಸಿಂಗ್ 4, ವಿ ಅಜಿತ್ ಕುಮಾರ್ 4, ಶಬೀರ್ ಬಾಪ್ಪು 3, ರಾಹುಲ್ ಚೌಧರಿ ಮತ್ತು ಅಜೀತ್ ತಲಾ 2 ಅಂಕ ಸೇರಿಸಿ ಬುಲ್ಸ್‌ಗೆ ಕೊಂಚ ಪೈಪೋಟಿ ನೀಡಿದರು. 45ನೇ ಪಂದ್ಯದ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಜೈಪುರ್, ಬೆಂಗಳೂರು ಮತ್ತು ಡೆಲ್ಲಿ ಕ್ರಮವಾಗಿ ಮೊದಲ 3 ಸ್ಥಾನಗಳಲ್ಲಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications