For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ಬೆಂಗಳೂರು ಬುಲ್ಸ್‌ ಗುದ್ದಿಗೆ ಕಂಗಾಲಾದ ತೆಲುಗು ಟೈಟನ್ಸ್‌

Bengaluru Bulls beat Telugu Titans 2019

ಪಟನಾ, ಆಗಸ್ಟ್‌ 08: ಅಕ್ಷರಶಃ ಅಧಿಕಾರಯುತ ಆಟವಾಡಿದ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ತಂಡ, ಇಲ್ಲಿ ನಡೆದ ಪ್ರೋ ಕಬಡ್ಡಿಯ ಏಳನೇ ಆವೃತ್ತಿಯ ಟೂರ್ನಿಯ ಲೀಗ್‌ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ವಿರುದ್ಧ 46-27 ಅಂಕಗಳ ಭರ್ಜರಿ ಜಯ ದಾಖಲಿಸಿತು.

ಇಲ್ಲಿನ ಪಾಟಿಲಿಪುತ್ರ ಕ್ರೀಡಾಂಗಣಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಅವರ ಮಿಂಚಿನ ರೇಡ್‌ಗಳ ಬಲದಿಂದ ಪ್ರಾಬಲ್ಯ ಮೆರೆದ ಬೆಂಗಳೂರು ಬುಲ್ಸ್‌ ಬರೋಬ್ಬರಿ 19 ಅಂಕಗಳ ಅಂತರದಲ್ಲಿ ಟೈಟನ್ಸ್‌ ಸವಾಲನ್ನು ಮೆಟ್ಟಿನಿಂತಿತು. ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ಬುಲ್ಸ್‌, ಈ ಜಯದೊಂದಿಗೆ 3ನೇ ಸ್ಥಾನಕ್ಕೆ ನೆಗೆಯಿತು.

ಬುಲ್ಸ್‌ ಈವರೆಗೆ ಲೀಗ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ ಮತ್ತು 1 ಸೋಲಿನೊಂದಿಗೆ ಒಟ್ಟು 20 ಅಂಕಗಳನ್ನು ದಾಖಲಿಸಿದೆ. ದಬಾಂಗ್‌ ಡೆಲ್ಲಿ (21) ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ (20) ಕ್ರಮವಾಗಿ ಅಂಕ ಪಟ್ಟಿಯ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿವೆ.

ಬುಲ್ಸ್‌ನ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ತಮ್ಮ ಅಮೋಘ ಪ್ರದರ್ಶನ ಕಾಯ್ದುಕೊಂಡಿದ್ದು, ಟೈಟನ್ಸ್‌ ಎದುರು 17 ಅಂಕಗಳನ್ನು ಗಳಿಸುವ ಮೂಲಕ ಜಯದ ರೂವಾರಿ ಎನಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ನಾಯಕ ರೋಹಿತ್‌ ಕುಮಾರ್‌ ಕೂಡ 8 ಅಂಕಗಳೊಂದಿಗೆ ತಂಡಕ್ಕ ಬಲವಾದರು. ಡಿಫೆನ್ಸ್‌ನಲ್ಲೂ ಬುಲ್ಸ್‌ಗೆ ಭದ್ರತೆ ಒದಗಿಸಿದ ಡಿಫೆಂಡರ್‌ ಮಹೇಂದ್ರ ಸಿಂಗ್‌ 7 ಅಂಕಗಳನ್ನು ಗಳಿಸಿ ಎದುರಾಳಿ ರೇಡರ್‌ಗಳಿಗೆ ಸಿಂಹಸ್ವಪ್ನವಾದರು.

ಮತ್ತೊಂದೆಡೆ ಟೈಟನ್ಸ್‌ ಪರ ಹೋರಾಟ ನಡೆಸಿದ ಸಿದ್ಧಾರ್ಥ್‌ ದೇಸಾಯ್‌ 11 ಅಂಕಗಳನ್ನು ಗಳಿಸಿದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಡಿಫೆಂಡರ್‌ ವಿಶಾಲ್‌ ಭಾರಧ್ವಜ್‌ 6 ಅಂಕಗಳ ಕೊಡುಗೆ ನೀಡಿದರು.

ಬೆಂಗಳೂರು ಬುಲ್ಸ್‌ ತಂಡ ಇದೇ ಭಾನುವಾರ ತನ್ನ 6ನೇ ಲೀಗ್‌ ಪಂದ್ಯವನ್ನಾಡಲಿದ್ದು ಅಪಾಯಕಾರಿ ಹರಿಯಾಣ ಸ್ಟೀಲರ್ಸ್‌ ತಂಡದ ಸವಾಲು ಎದುರಿಸಲಿದೆ.

400 ಅಂಕಗಳ ಸರಾದಾರ ಪವನ್‌
ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಬುಲ್ಸ್‌ ತಂಡದ ಯುವ ರೇಡರ್‌ ಪವನ್‌ ಕುಮಾರ್‌ ಮಹತ್ವದ ಮೈಲುಗಲ್ಲು ಮುಟ್ಟಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಕೇವಲ 61 ಪಂದ್ಯಗಳಲ್ಲಿ 400 ರೇಡ್‌ ಅಂಕಗಳನ್ನು ಗಳಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಪವನ್‌ ಪ್ರಸಕ್ತ ಲೀಗ್‌ನಲ್ಲೂ ಒಟ್ಟು 74 ಅಂಕಗಳೊಂದಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ರೇಡರ್‌ ಎನಿಸಿಕೊಂಡಿದ್ದಾರೆ.

Story first published: Thursday, August 8, 2019, 22:50 [IST]
Other articles published on Aug 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+