Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್‌ ಜಯಭೇರಿ

Pro Kabaddi 2019: Bengaluru Bulls beat U Mumba 35-33

ಜೈಪುರ್, ಸೆಪ್ಟೆಂಬರ್ 27: ಮೂರು ಪಂದ್ಯಗಳ ಸೋಲಿನ ಬಳಿಕ ಬೆಂಗಳೂರು ಬುಲ್ಸ್ ಮೊದಲ ಜಯ ದಾಖಲಿಸಿದೆ. ಜೈಪುರ್‌ನ ಸವಾಯ್ ಮಾನ್‌ ಸಿಂಗ್‌ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 27) ನಡೆದ ಪ್ರೊ ಕಬಡ್ಡಿ ಲೀಗ್ 109ನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ 35-33ರ ಜಯ ಗಳಿಸಿದೆ.

ಪ್ರೊ ಕಬಡ್ಡಿ ಲೀಗ್ ಪಾಯಿಂಟ್ ಟೇಬಲ್, ಗ್ಯಾಲರಿ, ವೇಳಾಪಟ್ಟಿ ಇತ್ಯಾದಿ ಇಲ್ಲಿದೆ

ಬೆಂಗಳೂರು ತಂಡದ ಬೆಸ್ಟ್ ರೈಡರ್ ಪವನ್ ಕುಮಾರ್ ಶೆಹ್ರಾವತ್ 11 ಪಾಯಿಂಟ್‌ ಕೊಡುಗೆ ತಂಡಕ್ಕೆ ಗೆಲುವು ತಂದಿತು. ಪಂದ್ಯದ ಬಳಿಕ ಬೆಂಗಳೂರು ಬುಲ್ಸ್ ಪಾಯಿಂಟ್‌ ಟೇಬಲ್‌ನಲ್ಲಿ 1 ಸ್ಥಾನ ಮೇಲಕ್ಕೇರಿದೆ. ಅಂದರೆ ಸದ್ಯ ಬೆಂಗಳೂರು 4ನೇ ಸ್ಥಾನದಲ್ಲಿದೆ.

ಬೆಂಗಳೂರು ಬುಲ್ಸ್ ತಂಡಕ್ಕೆ ಪವನ್ ಕುಮಾರ್ 11 (9 ರೈಡ್, 1 ಬೋನಸ್, 1 ಟ್ಯಾಕ್ಲ್‌), ಬಂತಿ 6, ಸೌರಭ್ ನಂದಲ್ 5, ಸುಮಿತ್ ಸಿಂಗ್ 3, ಅಮಿತ್ ಶಿಯೋರಾನ್ 3, ಆಶಿಶ್ ಕುಮಾರ್ 1 ಅಂಕ ಸೇರಿಸಿ ಗೆಲುವಿಗೆ ನೆರವಾದರು. ಇದಕ್ಕೂ ಹಿಂದಿನ ಪಂದ್ಯಗಳಲ್ಲಿ ಬೆಂಗಳೂರು ತಂಡ ಡೆಲ್ಲಿ, ಪೂಣೆ, ಬೆಂಗಾಲ್ ವಿರುದ್ಧ ಸೋತಿತ್ತು.

ಯು ಮುಂಬಾದಿಂದ ಅಭಿಷೇಕ್ ಸಿಂಗ್ 10, ಅತುಲ್ ಎಂಎಸ್ 9, ಸಂದೀಪ್ ನರ್ವಾಲ್ 4, ಸುರೀಂದರ್ ಸಿಂಗ್ 3, ರೋಹಿತ್ ಬಳಿಯಾನ್ 2, ಫಝಲ್ ಅತ್ರಾಚಲಿ 2 ಅಂಕಗಳ ಕೊಡುಗೆಯಿತ್ತರು. ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಹರ್ಯಾಣ ಸ್ಟೀಲರ್ಸ್, ಬೆಂಗಳೂರು ಬುಲ್ಸ್, ಯು ಮುಂಬಾ ಮೊದಲ 5 ಸ್ಥಾನಗಳಲ್ಲಿವೆ. ಡೆಲ್ಲಿ, ಬೆಂಗಾಲ್ ಕ್ವಾಲಿಫೈಯರ್‌ಗೆ ಪ್ರವೇಶಿಸಿದೆ.

Story first published: Friday, September 27, 2019, 22:01 [IST]
Other articles published on Sep 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+