ಪ್ರೊ ಕಬಡ್ಡಿ: ಜೈಪುರ್ ಪಿಂಕ್ ಪ್ಯಾಂಥರ್ಸ್‌ಗೆ ಗುದ್ದಿದ ಬೆಂಗಳೂರು ಬುಲ್ಸ್

ನವದೆಹಲಿ, ಆಗಸ್ಟ್ 25: ನಾಯಕ ರೋಹಿತ್ ಕುಮಾರ್ ಸಾಹಸದ ಫಲವಾಗಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ, ಭಾನುವಾರ (ಆಗಸ್ಟ್ 25) ನಡೆದ ಪ್ರೊ ಕಬಡ್ಡಿ ಲೀಗ್ 58ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ 41-30ರ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ರೋಹಿತ್, ತಂಡಕ್ಕೆ ಭರ್ಜರಿ 13 ಪಾಯಿಂಟ್‌ಗಳ ಕೊಡುಗೆಯಿತ್ತರು.
ನವದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ರೋಹಿತ್ 10 ರೇಡ್, 3 ಬೋನಸ್ ಸೇರಿ ಒಟ್ಟಿಗೆ 13 ಅಂಕಗಳನ್ನು ರೋಹಿತ್ ಸೇರಿಸಿದರು. ಇನ್ನು ಪವನ್ ಕುಮಾರ್ 8, ಮೋಹೀಂದರ್ ಸಿಂಗ್ 6, ಮೋಹಿತ್ ಸೆಹ್ರಾವತ್ 5, ಸೌರಭ್ ನಂದಲ್ 5 ಅಂಕ ಸೇರಿಸಿ ಬುಲ್ಸ್‌ಗೆ ಬಲ ತುಂಬಿದರು.
ಆಟದ ಕೊನೇ ಘಳಿಗೆಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಅಂಕ ಕದಿಯಲು ಕೊಸರಾಟ ನಡೆಸಿತಾದರೂ ಜಯ ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೈಪುರ್ ಪರ ನಿತಿನ್ ರಾವಲ್ 8, ಅಜಿಂಕ್ಯ ಪವಾರ್ 5, ಸುಶೀಲ್ ಗುಲಿಯಾ 3, ಸಂದೀಪ್ ದುಲ್, ದೀಪಕ್ ನರ್ವಾಲ್, ಸುನಿಲ್ ಸಿದ್ಧ್‌ಗಾವಲಿ, ಸಾಂತಪನಸೇಲ್ವಂ ತಲಾ 2 ಅಂಕಗಳ ಕೊಡುಗೆ ನೀಡಿದರು. ಈ ಪಂದ್ಯದ ಬಳಿಕ ಜೈಪುರ್ 1, ಬೆಂಗಳೂರು 4ನೇ ಸ್ಥಾನದಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications