For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್ 2019: ತಮಿಳ್ ತಲೈವಾಸ್ ಕೆಡವಿದ ಬೆಂಗಳೂರು ಬುಲ್ಸ್

Pro Kabaddi 2019: Bengaluru Leads Tamil 33-27

ಬೆಂಗಳೂರು, ಸೆಪ್ಟೆಂಬರ್ 2: ಹಿಂದಿನ ಪಂದ್ಯದಲ್ಲಿ ಗುಜರಾತ್ ಫಾರ್ಚ್ಯೂನ್‌ಜಿಯಂಟ್ಸ್ ಎದುರು ಸೋತಿದ್ದ ಬೆಂಗಳೂರು ಬುಲ್ಸ್ ಮತ್ತೆ ತಿರುಗಿಬಿದ್ದಿದೆ. ಬೆಂಗಳೂರಿನ ಕಂಠೀವರ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 1) ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ 33-27ರ ಗೆಲುವನ್ನಾಚರಿಸಿತು.

ಗುಜರಾತ್ ಎದುರು ಕೇವಲ 3 ಪಾಯಿಂಟ್ ಸೇರಿಸಿದ್ದ ಬೆಂಗಳೂರು ಬುಲ್ಸ್ ಬೆಸ್ಟ್ ರೈಡರ್ ಪವನ್ ಶೆಹ್ರಾವತ್, ತಲೈವಾಸ್ ಎದುರು ಭರ್ಜರಿ 17 (13 ರೈಡ್, 4 ಬೋನಸ್) ಪಾಯಿಂಟ್ಸ್ ಕೊಡುಗೆಯಿತ್ತರು. ನಾಯಕ ರೋಹಿತ್ ಕುಮಾರ್ 5, ಅಮಿತ್ ಶಿಯೋರಾನ್ 5, ಮೋಹಿತ್ ಶೆಹ್ರಾವತ್ 2 ಅಂಕ ಸೇರಿಸಿ ತಂಡಕ್ಕೆ ಬಲ ತುಂಬಿದರು.

ತಮಿಳ್ ತಲೈವಾಸ್ ಪರ ರಾಹುಲ್ ಚೌಧರಿ 8, ಮನ್ಜಿತ್ ಚಿಲ್ಲರ್ 4, ಅಜಯ್ ಠಾಕೂರ್ 4, ಸಾಗರ್ 3, ಮೋಹಿತ್ ಚಿಲ್ಲರ್ 3, ರಣ್ ಸಿಂಗ್ 2, ವಿ ಅಜಿತ್ ಕುಮಾರ್ 2 ಅಂಕ ಸೇರಿಸಿ ತಕ್ಕಮಟ್ಟಿನ ಪೈಪೋಟಿ ನೀಡಿದರು. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಮೊದಲೆರಡು ಸ್ಥಾನಗಳಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್ ಇವೆ.

Story first published: Monday, September 2, 2019, 0:01 [IST]
Other articles published on Sep 2, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+