Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಡೆಲ್ಲಿ ಸೋಲಿಸಿ ಚೊಚ್ಚಲ ಟ್ರೋಫಿ ಎತ್ತಿದ ಬೆಂಗಾಲ್ ವಾರಿಯರ್ಸ್

Pro Kabaddi 2019 Final: Bengal Warriors vs Dabang Delhi

ಅಹ್ಮದಾಬಾದ್, ಅಕ್ಟೋಬರ್ 19: ಪ್ರೊ ಕಬಡ್ಡಿ ಲೀಗ್ 2019ರ ಸೀಸನ್‌ನ ಚಾಂಪಿಯನ್‌ ಆಗಿ ಬೆಂಗಾಲ್ ವಾರಿಯರ್ಸ್ ಹೊರ ಹೊಮ್ಮಿದೆ. ಶನಿವಾರ (ಅಕ್ಟೋಬರ್ 19) ನಡೆದ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿಯನ್ನು 39-34ರ ಅಂತರದಿಂದ ಸೋಲಿಸಿದ ಬೆಂಗಾಲ್ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ.

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಏಕ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ದಬಾಂಗ್‌ ಡೆಲ್ಲಿ ಮುನ್ನಡೆ ಸಾಧಿಸಿತ್ತಾದರೂ ಬೆಂಗಾಲ್ ವಾರಿಯರ್ಸ್ ಪಂದ್ಯವನ್ನು ಮೊದಲ ಹಾಫ್‌ನಲ್ಲಿ ಜಿದ್ದಾಜಿದ್ದಿಗೆ ತೆಗೆದುಕೊಂಡು ಹೋಯಿತು. ದ್ವಿತೀಯಾರ್ಧದಲ್ಲಿ ಮುನ್ನಡೆ ಸಾಧಿಸುತ್ತಾ ಸಾಗಿ ಫಲಿತಾಂಶವನ್ನು ತನ್ನೆಡೆಗೆ ತಂದುಕೊಂಡಿತು.

ಬೆಂಗಾಲ್ ವಾರಿಯರ್ಸ್ ಪರ ಇಸ್ಮಾಯಿಲ್ ನಬಿಬಖ್ಷ್ ಮತ್ತು ಸುಕೇಶ್ ಹೆಗ್ಡೆ ಆಟ ಗೆಲುವಿನ ನೆಲೆಯಲ್ಲಿ ನೆರವಿಗೆ ಬಂತು. ಇಸ್ಮಾಯಿಲ್ 10, ಸುಕೇಶ್ 8, ರವೀಂದ್ರ ರಮೇಶ್ 6, ಜೀವ ಕುಮಾರ್ 4, ಬಲ್ದೇವ್ ಸಿಂಗ್ 2, ರಿಂಕು ನರ್ವಾಲ್ 2 ಅಂಕ ಸೇರಿಸಿ ತಂಡಕ್ಕೆ ಬಲ ತುಂಬಿದರು.

ದಬಾಂಗ್ ಡೆಲ್ಲಿ ಪರ ನವೀನ್‌ ಎಕ್ಸ್‌ಪ್ರೆಸ್‌ ಹೋರಾಡಿ ಗಮನ ಸೆಳೆದರು. ನವೀನ್ 18 (11 ರೈಡ್, 7 ಬೋನಸ್), ಅನಿಲ್ ಕುಮಾರ್ 3, ವಿಜಯ್ 3, ಚಂದ್ರನ್ ರಂಜಿತ್ 2, ಮೀರಜ್ ಶೇಖ್ 2, ರವೀಂದರ್ ಪಾಹಲ್ 1 ಅಂಕ ಸೇರಿಸಿ ತಕ್ಕ ಮಟ್ಟಿನ ಪೈಪೋಟಿ ನೀಡಿದರು.

Story first published: Saturday, October 19, 2019, 21:29 [IST]
Other articles published on Oct 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+