For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಬುಲ್ಸ್ ತಡೆದು ನಿಲ್ಲಿಸಿದ ಗುಜರಾತ್‌ ಫಾರ್ಚ್ಯೂನ್‌ಜೈಂಟ್ಸ್

Pro Kabaddi 2019: Gujarat Fortunegiants Beat Bengaluru Bulls

ಬೆಂಗಳೂರು, ಸೆಪ್ಟೆಂಬರ್ 1: ಪ್ರೊ ಕಬಡ್ಡಿ ಲೀಗ್ 2019ರ ಸೀಸನ್‌ನಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಸೋಲಿನ ಕಹಿ ಅನುಭವಿಸುತ್ತಿದೆ. ಶನಿವಾರ (ಆಗಸ್ಟ್ 31) ಬೆಂಗಳೂರಿನ ಕಠೀರವ ಸ್ಟೇಡಿಯಂನಲ್ಲಿ ನಡೆದ 67ನೇ ಪಂದ್ಯದಲ್ಲಿ ಗುಜರಾತ್‌ ಫಾರ್ಚ್ಯೂನ್‌ಜೈಂಟ್ಸ್ ಎದುರು ಬೆಂಗಳೂರು ಬುಲ್ಸ್ ತಂಡ 23-32 ಅಂತರದಿಂದ ಪರಾಭವಗೊಂಡಿತು.

ಬೆಂಗಳೂರು ಬುಲ್ಸ್‌ನ ಒನ್‌ಮ್ಯಾನ್ ಆರ್ಮಿ ಪವನ್ ಕುಮಾರ್ ಶೆಹ್ರಾವತ್ ಈ ಪಂದ್ಯದಲ್ಲಿ ಕೇವಲ 3 ಪಾಯಿಂಟ್ ಸೇರಿಸಿದರು. ಇನ್ನು ಸೌರಭ್ ನಂದಲ್ 8, ಮಹೇಂದರ್ ಸಿಂಗ್ 4, ರೋಹಿತ್ ಕುಮಾರ್ 3, ಸುಮಿತ್ ಸಿಂಗ್ 3, ಅಮಿತ್ ಶಿಯೋರನ್ 1 ಅಂಕ ಸೇರಿಸಿದರಾದರೂ ಗೆಲುವಿನ ನೆಲೆಯಲ್ಲಿ ನೆರವಿಗೆ ಬರಲಿಲ್ಲ.

ಒಗ್ಗಟ್ಟಿನಾಟ ತೋರಿಸಿದ ಗುಜರಾತ್‌ ಫಾರ್ಚ್ಯೂನ್‌ಜೈಂಟ್ಸ್ ನಿಂದ ಮೋರೆ ಜಿಬಿ 5, ಸಚಿನ್ 5, ಪರ್ವೇಶ್‌ ಭೈನ್ಸ್‌ವಾಲ್ 4, ರೋಹಿತ್ ಗುಲಿಯಾ 4, ಸುನಿಲ್ ಕುಮಾರ್ 3, ಸುಮಿತ್ 2, ಅಂಕಿತ್ 1 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.

ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ 6ನೇ ಸ್ಥಾನಕ್ಕೆ ಕುಸಿದಿತ್ತು. ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಜೈಪುರ್‌ ಪಿಂಕ್ ಪ್ಯಾಂಥರ್ಸ್, ಹರ್ಯಾಣ ಸ್ಟೀಲರ್ಸ್ ಮತ್ತು ಯು ಮುಂಬಾ ತಂಡಗಳು ಮೊದಲ 5 ಸ್ಥಾನಗಳಲ್ಲಿ ಇದ್ದವು.

Story first published: Sunday, September 1, 2019, 16:51 [IST]
Other articles published on Sep 1, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+