For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಸತತ 6 ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿದ ಗುಜರಾತ್

Pro Kabaddi 2019: Gujarat Fortunegiants beat Patna Pirates

ಚೆನ್ನೈ, ಆಗಸ್ಟ್ 23: ಚೆನ್ನೈಯಲ್ಲಿರುವ ಜವಾಹರ್‌ ಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ (ಆಗಸ್ಟ್ 23) ನಡೆದ ಪ್ರೊ ಕಬಡ್ಡಿ ಲೀಗ್ 54ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಗುಜರಾತ್ ಫಾರ್ಚ್ಯೂನ್ ಜೇಂಟ್ಸ್ 29-26ರ ಜಯ ಗಳಿಸಿತು. ಇದರೊಂದಿಗೆ ಹಿಂದಿನ ಪಂದ್ಯಗಳಲ್ಲಿ ಸತತ 6 ಸೋಲು ಕಂಡಿದ್ದ ಗುಜರಾತ್ ಮತ್ತೆ ಜಯದ ಹಾದಿಗೆ ಮರಳಿದೆ.

ಗುಜರಾತ್ ಫಾರ್ಚ್ಯೂನ್ ಜೇಂಟ್ಸ್ ನಿಂದ ರೋಹಿತ್ ಗುಲಿಯಾ ಅತ್ಯುತ್ತಮ ಆಟವಾಡಿದರು. ಗುಲಿಯಾ 7 ರೇಡ್, 3 ಬೋನಸ್, ಮೋರೆ ಜಿಬಿ ಒಟ್ಟು 6 ಅಂಕ, ಸುನಿಲ್ ಕುಮಾರ್ 3, ಪಂಕಜ್ 3, ಪರ್ವೇಶ್ 2, ರುತುರಾಜ್ ಕೊರವಿ 2, ಸೋನು 1 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು.

ಪಾಟ್ನಾ ಪರ ಪರ್ದೀಪ್ ನರ್ವಾಲ್ 9, ಮೊಹಮ್ಮದ್ ಇಸ್ಮಾಯಿಲ್ 4, ಮೋನು 3, ಹಾದಿ ಒಸ್ತಾರಕ್ 3, ನೀರಜ್ ಕುಮಾರ್ 2, ಜಯ್‌ದೀಪ್ 2 ಅಂಕ ಸೇರಿಸಿ ತಂಡದ ಗೆಲುವಿಗಾಗಿ ಶ್ರಮಿಸಿದರಾದರೂ ಪ್ರಯೋಜನಕ್ಕೆ ಬಾರಲಿಲ್ಲ. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಜೈಪುರ್, ಬೆಂಗಾಲ್, ಡೆಲ್ಲಿ ಕ್ರಮವಾಗಿ ಅಗ್ರ ಮೂರು ಸ್ಥಾನಗಳಲ್ಲಿದ್ದವು. ಬೆಂಗಳೂರು 4ನೇ ಸ್ಥಾನದಲ್ಲಿತ್ತು.

Story first published: Friday, August 23, 2019, 22:37 [IST]
Other articles published on Aug 23, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+