Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಜರಾತ್ ಫಾರ್ಚ್ಯೂನ್ ಜೇಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್‌ಗೆ ಜಯ

Pro Kabaddi 2019: Haryana Steelers beat Gujarat Fortunegiants

ನವದೆಹಲಿ, ಆಗಸ್ಟ್ 28: ನದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ (ಆಗಸ್ಟ್ 28) ನಡೆದ ಪ್ರೊ ಕಬಡ್ಡಿ ಲೀಗ್ 62ನೇ ಪಂದ್ಯದಲ್ಲಿ ಗುಜರಾತ್ ಫಾರ್ಚ್ಯೂನ್ ಜೇಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ 41-25ರ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಹರ್ಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಪಂದ್ಯದ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಸಾಗಿದ ಹರ್ಯಾಣ ಸ್ಟೀಲರ್ಸ್ ಸುಲಭ ಗೆಲುವು ದಾಖಲಿಸಿತು. ಸ್ಟೀಲರ್ಸ್ ಪರ ವಿಕಾಸ್ ಖಂಡೋಲ 8, ಪ್ರಶಾಂತ್ ಕುಮಾರ್ ರೈ 8, ವಿನಯ್ 7, ರವಿ ಕುಮಾರ್ 6, ವಿಕಾಸ್ ಕಾಲೆ 3 ಅಂಕ ಸೇರಿಸಿದರು.

ಗುಜರಾತ್ ಫಾರ್ಚ್ಯೂನ್ ಜೇಂಟ್ಸ್ ಪರ ಅಬೋಲ್ಫಝಲ್ 4, ಮೋರೆ ಬಿಜಿ 4, ರೋಹಿತ್ ಗುಲಿಯಾ 4, ವಿನೋದ್ ಕುಮಾರ್ 3, ರುತುರಾಜ್ ಕೊರವಿ 2, ಲಲಿತ್ ಚೌಧರಿ 2, ಸುಮಿತ್ 2 ಅಂಕ ಸೇರಿಸಿ ತಂಡವನ್ನು ತಕ್ಕಮಟ್ಟಿಗೆ ಬೆಂಬಲಿಸಿದರು. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಡೆಲ್ಲಿ, ಜೈಪುರ್, ಹರ್ಯಾಣ, ಬೆಂಗಾಲ್, ಬೆಂಗಳೂರು ಮೊದಲ 5 ಸ್ಥಾನಗಳಲ್ಲಿದ್ದವು.

Story first published: Wednesday, August 28, 2019, 22:23 [IST]
Other articles published on Aug 28, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+