Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ 2019: ಹರ್ಯಾಣ ಸ್ಟೀಲರ್ಸ್‌ಗೆ ಶರಣಾದ ದಬಾಂಗ್ ಡೆಲ್ಲಿ

Pro Kabaddi 2019: Haryana Steelers thumps Dabang Delhi

ಕೋಲ್ಕತ್ತ, ಸೆಪ್ಟೆಂಬರ್ 7: ಕೋಲ್ಕತ್ತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 7) ನಡೆದ ಪ್ರೊ ಕಬಡ್ಡಿ 79ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ಗೆ ದಂಬಾಂಗ್ ಡೆಲ್ಲಿ ಕೆಸಿ 47-25ರ ಅಂತರದಿಂದ ಶರಣಾಗಿದೆ. ಡೆಲ್ಲಿ ಗೆಲ್ಲಿಸಲು ನವೀನ್ ಕುಮಾರ್ ಮಾಡಿದ ಹೋರಾಟ ವ್ಯರ್ಥಗೊಂಡಿತು.

ಹರ್ಯಾಣ ಸ್ಟೀಲರ್ಸ್ ಪರ ವಿಕಾಸ್ ಖಂಡೋಲಾ 10, ಪ್ರಶಾಂತ್ ಕುಮಾರ್ ರೈ 10 ಅಂಕ ಸೇರಿಸಿ ತಂಡ ದೊಡ್ಡ ಅಂತರದ ಗೆಲುವು ಸಾಧಿಸಲು ಕಾರಣರಾದರು. ಇನ್ನು ವಿಕಾಸ್ ಕಾಲೆ 5, ಸುನಿಲ್ 4, ಧರ್ಮರಾಜ್ 4, ನವೀನ್ 4, ವಿನಯ್ 2, ರವಿಕುಮಾರ್ 1 ಅಂಕ ಸೇರಿಸಿ ಸ್ಟೀಲರ್ಸ್ ಬೆಂಬಲಿಸಿದರು.

ದಬಾಂಗ್ ಡೆಲ್ಲಿಯಿಂದ ನವೀನ್ ಕುಮಾರ್ 11, ಚಂದ್ರನ್ ರಂಜಿತ್ 5, ಜೋಗೀಂದರ್ ಸಿಂಗ್ ನರ್ವಾಲ್ 3, ವಿಶಾಲ್ ಮಾನೆ, ಅನಿಲ್ ಕುಮಾರ್, ವಿಜಯ್, ಅಮನ್ ಕಡಿಯಾನ್, ಮೇರಜ್ ಶೈಖ್ ತಲಾ 1 ಅಂಕದ ಕೊಡುಗೆಯಿತ್ತರು. ಸದ್ಯ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಳೂರು ಬುಲ್ಸ್, ಹರ್ಯಾಣ ಸ್ಟೀಲರ್ಸ್ ಮೊದಲ ಮೂರು ಸ್ಥಾನಗಳಲ್ಲಿವೆ.

Story first published: Saturday, September 7, 2019, 22:38 [IST]
Other articles published on Sep 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+