For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ಪಿಂಕ್ ಪ್ಯಾಂಥರ್ಸ್-ಸ್ಟೀಲರ್ಸ್ ರೋಚಕ ಪಂದ್ಯ ಸಮಬಲ

Pro Kabaddi 2019: Jaipur Pink Panthers vs Haryana Steelers match draw

ಕೋಲ್ಕತ್ತ, ಸೆಪ್ಟೆಂಬರ್ 11: ರೈಡರ್ ದೀಪಕ್ ನಿವಾಸ್ ಹೂಡಾ ಅವರ ಬಲದಿಂದಾಗಿ ಹರ್ಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯವನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್ 32-32ರಿಂದ ಸಮಬಲಗೊಳಿಸಿಕೊಂಡಿದೆ. ಕೋಲ್ಕತ್ತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 84ನೇ ಪಂದ್ಯ ರೋಚಕವೆನಿಸಿತ್ತಲ್ಲದೆ, ಸಮಬಲದ ಹೋರಾಟದಿಂದ ಅಂತ್ಯಕಂಡಿತು.

ಜೈಪುರ್ ಪಿಂಕ್ ಪ್ಯಾಂಥರ್ಸ್ ಪರ ದೀಪಕ್ ನಿವಾಸ್ ಹೂಡಾ 12 ರೈಡ್, 2 ಬೋಸನ್ ಸಹಿತ 14 ಅಂಕಗಳ ಕೊಡುಗೆಯಿತ್ತರು. ಇನ್ನು ಸಂದೀಪ್ ದುಲ್ 5, ನೀಲೇಶ್ ಸಾಲುಂಕೆ 3, ಸಚಿನ್ ನರ್ವಾಲ್ 2, ಪವನ್ ಟಿಆರ್ ಮತ್ತು ಎಲವರಸನ್ ಎ ತಲಾ 1 ಅಂಕ ಸೇರಿಸಿ ತಂಡಕ್ಕೆ ಬಲ ತುಂಬಿದರು.

ಹರ್ಯಾಣ ಸ್ಟೀಲರ್ಸ್‌ನಿಂದ ವಿಕಾಶ್ ಖಂಡೋಲ 7, ರವಿ ಕುಮಾರ್ 5, ಪ್ರಶಾಂತ್ ಕುಮಾರ್ 5, ಸುನಿಲ್ 5, ನವೀನ್ 4, ಧರ್ಮರಾಜ್ 3, ವಿಕಾಸ್ ಕಾಲೆ 1 ಅಂಕ ನೀಡಿ ಇತ್ತಂಡಗಳ ಪೈಪೋಟಿಗೆ ಕಾರಣರಾದರು. ಈ ಪಂದ್ಯದೊಂದಿಗೆ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಹರ್ಯಾಣ ಸ್ಟೀಲರ್ಸ್ ಮತ್ತು ಬೆಂಗಳೂರು ಬುಲ್ಸ್ ಮೊದಲ 4 ಸ್ಥಾನಗಳಲ್ಲಿವೆ.

Story first published: Wednesday, September 11, 2019, 22:42 [IST]
Other articles published on Sep 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+