ಪ್ರೊ ಕಬಡ್ಡಿ ಲೀಗ್: ಪುಣೇರಿ ಪಲ್ಟಾನ್ ಪಲ್ಟಿ ಮಾಡಿದ ಪಾಟ್ನಾ ಪೈರೇಟ್ಸ್!

ಪುಣೆ, ಸೆಪ್ಟೆಂಬರ್ 15: ಪ್ರೊ ಕಬಡ್ಡಿ ಲೀಗ್ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಆತಿಥೇಯ ಪುನೇರಿ ಪಲ್ಟಾನ್ ವಿರುದ್ಧ 55-33ರ ಜಯ ಗಳಿಸಿದೆ. ಭಾನುವಾರ (ಸೆಪ್ಟೆಂಬರ್ 15) ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಪರ್ದೀಪ್ ನರ್ವಾಲ್ ಮತ್ತು ನೀರಜ್ ಕುಮಾರ್ ಆಕರ್ಷಕ ಆಟದ ನೆರವಿನಿಂದ ಪಾಟ್ನಾ 50+ ಅಂಕದೊಂದಿಗೆ ಗೆಲುವು ದಾಖಲಿಸಿತು.
ಬಲಿಷ್ಠ ಪಾಟ್ನಾ ಪೈರೇಟ್ಸ್‌ನಿಂದ ಪರ್ದೀಪ್ ನರ್ವಾಲ್ 18 (16 ರೈಡ್, 2 ಬೋನಸ್), ನೀರಜ್ ಕುಮಾರ್ 11 (10 ಟ್ಯಾಕ್ಲ್, 1 ಬೋನಸ್), ಹಾದಿ ಒಶ್ತೋರಕ್ 5, ಮೋನು 4, ಲೀ ಜಂಗ್ ಕುನ್ 3, ಜಯ್ ದೀಪ್ 2, ವಿಕಾಶ್ ಜಗ್ಲಾನ್ 1 ಅಂಕ ಸೇರಿಸಿ ತಂಡಕ್ಕೆ ಗೆಲುವು ತಂದರು.
ಆತಿಥೇಯ ಪುಣೇರಿ ಪಲ್ಟಾನ್‌ನಿಂದ ಮನ್ಜೀತ್ 8, ಪಂಕಜ್ ಮೋಹಿತೆ 7, ನಿತಿನ್ ತೋಮರ್ 6, ಅಮಿತ್ ಕುಮಾರ್ 5, ಸುರ್ಜೀತ್ ಸಿಂಗ್ 3, ಪವನ್ ಕುಮಾರ್ ಕಡಿಯಾನ್ 2, ಹಾದಿ ತಾಜಿಕ್ ಮತ್ತು ಗಿರೀಶ್ ಎರ್ನಾಕ್ ತಲಾ 1 ಪಾಯಿಂಟ್ ಕೊಡುಗೆಯಿತ್ತರು. ಅಂಕಪಟ್ಟಿಯಲ್ಲೀಗ ಡೆಲ್ಲಿ, ಬೆಂಗಾಲ್, ಹರ್ಯಾಣ ಮೊದಲ 3 ಸ್ಥಾನಗಳಲ್ಲಿವೆ.
Story first published: Sunday, September 15, 2019, 22:58 [IST]
Other articles published on Sep 15, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications