ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ವಿರುದ್ಧ ಪುಣೇರಿ ಪಲ್ಟಾನ್ ಜಯಭೇರಿ

ನವದೆಹಲಿ, ಆಗಸ್ಟ್ 30: ಮನ್ಜೀತ್ ಚತುರ ಆಟದಿಂದಾಗಿ ಪುಣೇರಿ ಪಲ್ಟಾನ್ 4ನೇ ಗೆಲುವು ದಾಖಲಿಸಿದೆ. ಶುಕ್ರವಾರ (ಆಗಸ್ಟ್ 30) ನವದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 65ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಪುಣೇರಿ ಪಲ್ಟಾನ್ 34-27ರ ಜಯ ಗಳಿಸಿದೆ.
ಪುಣೇರಿ ಪಲ್ಟಾನ್ ಪರ ಮನ್ಜೀತ್ 9, ನಿತಿನ್ ತೋಮರ್ 8, ಅಮಿತ್ ಕುಮಾರ್ 4, ಸಾಗರ್ ಬಿ ಕೃಷ್ಣ 4, ಶುಭಂ ಶಿಂಧೆ 2, ಸುರ್ಜೀತ್ ಸಿಂಗ್ ಮತ್ತು ಜಾಧವ್ ಬಾಲಸಾಹೇಬ್ 1 ಅಂಕಗಳ ಕೊಡುಗೆ ನೀಡಿದ್ದು ಗೆಲುವಿನ ನಿಟ್ಟಿನಲ್ಲಿ ನೆರವಾಯ್ತು.
ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ್ ದೇಸಾಯ್ 7, ಸಿ ಅರ್ಜುನ್ 6, ವಿಶಾಲ್ ಭಾರದ್ವಾಜ್ 5, ಫರ್ಹಾದ್ ಮಿಲಗಾರ್ಡನ್, ಅಮಿತ್ ಕುಮಾರ್, ಅಬೋಝರ್ ಮತ್ತು ಅಂಕಿತ್ ಬೆನಿವಾಲ್ 2 ಅಂಕ ಸೇರಿಸಿದರಾದರೂ ತಂಡಕ್ಕೆ ಗೆಲುವು ತರಲಾಗಲಿಲ್ಲ. ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್ ಮೊದಲ 3 ಸ್ಥಾನಗಳಲ್ಲಿದ್ದವು.
Story first published: Friday, August 30, 2019, 21:56 [IST]
Other articles published on Aug 30, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications