For Quick Alerts
ALLOW NOTIFICATIONS  
For Daily Alerts

ಕಬಡ್ಡಿ: ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮಣಿಸಿದ ಯು ಮುಂಬಾ

Pro Kabaddi 2019: Telugu Titans vs U Mumba Match update

ಹೈದರಾಬಾದ್, ಜುಲೈ 20: ಹೈದರಾಬಾದ್‌ನ ಗಚಿಬೌಲಿ ಇಂಡೋರ್‌ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 20) ನಡೆದ ಪ್ರೊ ಕಬಡ್ಡಿ ಲೀಗ್ 2019ರ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಯು ಮುಂಬಾ 31-25ರ ಗೆಲುವು ದಾಖಲಿಸಿದೆ. ಅಭಿಷೇಕ್ ಸಿಂಗ್ ರೇಡಿಂಗ್ ಪಾಯಿಂಟ್ ಮುಂಬೈಗೆ ಗೆಲುವಿನ ಶುಭಾರಂಭ ನೀಡಿದೆ.

ಪಂದ್ಯಾರಂಭದಿಂದಲೂ ಯು ಮುಂಬಾ ಮುನ್ನಡೆ ಕಾಯ್ದಿರಿಸಿಕೊಂಡಿತು. ಮೊದಲಾರ್ಧ(20 ನಿಮಿಷ)ದಲ್ಲಿ ಯು ಮುಂಬಾ 17-10ರ ಮುನ್ನಡೆ ಸಾಧಿಸಿತ್ತು. ಮುಂಬೈ ಪರ ಎದುರಾಳಿಗೆ ರೇಡಿಂಗ್ ಬೆದರಿಕೆಯೊಡ್ಡಿದ ಅಭಿಷೇಕ್ ಭರ್ಜರಿ 10 ಪಾಯಿಂಟ್‌ಗಳ ಕೊಡುಗೆಯಿತ್ತರು.

ಇನ್ನು ರೋಹಿತ್ ಬಾಳಿಯಾನ್ 4 ರೇಡಿಂಗ್ ಪಾಯಿಂಟ್, ಅತುಲ್ ಎಂಎಸ್ 2 (ರೇಡಿಂಗ್1, ಬೋನಸ್ 1), ಸಂದೀಪ್ ನರ್ವಾಲ್ 4 (ಟ್ಯಾಕ್ಲ್), ಫಝಲ್ ಅಟ್ರಾಚಲಿ 4 (ಟ್ಯಾಕ್ಲ್), ಸುರೇಂದರ್ ಸಿಂಗ್ 2 (ಟ್ಯಾಕ್ಲ್) ಪಾಯಿಂಟ್ ಸೇರಿಸಿ ತಂಡಕ್ಕೆ ಗೆಲುವು ತಂದರು.

ತೆಲುಗು ಟೈಟಾನ್ಸ್ ಪರ ರಜನೀಶ್ ದಳಾಲ್ 8 (1 ಟ್ಯಾಕ್ಲ್, 7 ಬೋನಸ್), ಸಿದ್ಧಾರ್ಥ್ ದೇಸಾಯ್ 5 (4 ರೇಟಿಂಗ್, 1 ಬೋನಸ್), ರಾಜೇಶ್ ಗೌಡ 4 (2 ರೇಡಿಂಗ್, 1 ಟ್ಯಾಕ್ಲ್, 1 ಬೋಸನ್), ಫರ್ಹಾದ್ ಮಿಲಗರ್ಧಾನ್ 3, ಅಬೋಝರ್ 2, ವಿಶಾಲ್ ಭಾರದ್ವಾಜ್ 2, ಸಿ ಅರುಣ್ 1 ಅಂಕ ಸೇರಿಸಿದರಾದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.

Story first published: Saturday, July 20, 2019, 21:49 [IST]
Other articles published on Jul 20, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+