For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ಪಟನಾ ಪೈರೇಟ್ಸ್‌ ಪಡೆಯನ್ನು ಕಟ್ಟಿಹಾಕಿದ ಯು ಮುಂಬಾ

U Mumba Beat Patana Pirates by 34-30 2019

ಅಹಮದಾಬಾದ್‌, ಆಗಸ್ಟ್‌ 16: ಸಂಘಟಿತ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ಸ್‌ ಯು ಮುಂಬಾ ತಂಡ, ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್‌ ಪಟನಾ ಪೈರೇಟ್ಸ್‌ ಎದುರು 34-30 ಅಂತರದ ರೋಚಕ ಜಯ ದಾಖಲಿಸಿತು.

ಬಹುತೇಕ ಹೊಸ ಆಟಗಾರರಿಂದ ಕೂಡಿರುವ ಯು ಮುಂಬಾ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಪರದಾಡುತ್ತಿದೆ ಆದರೂ, ಇಲ್ಲಿನ ಅರೆನಾ ಬೈ ಟ್ರಾನ್ಸ್‌ ಸ್ಟೇಡಿಯಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಪೈರೇಟ್ಸ್‌ ಪಡೆಯನ್ನು ತನ್ನ ಭದ್ರ ಡಿಫೆನ್ಸ್‌ ಕೋಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಯಿತು.

ನಾಯಕ ಫಝಲ್‌ ಅತ್ರಾಚಲಿ (3 ಅಂಕ) ಮತ್ತು ಆಲ್‌ರೌಂಡರ್‌ ಸಂದೀಪ್‌ ನರ್ವಾಲ್‌ (6 ಅಂಕ) ಅವರ ಭದ್ರ ಡಿಫೆನ್ಸ್‌ ಮೂಲಕ ಎದುರಾಳಿ ರೇಡರ್‌ಗಳನ್ನು ಕೆಡವಿದ ಯು ಮುಂಬಾ ತಂಡಕ್ಕೆ, ರೇಡ್‌ಗಳಲ್ಲಿ ರೋಹಿತ್‌ ಬಲಿಯಾನ್‌ (9), ಅತುಲ್‌ ಎಂ.ಎಸ್‌ (8) ಮತ್ತು ಅರ್ಜುನ್‌ ದೇಶ್ವಾಲ್‌ (4) ಅಂಕಗಳನ್ನು ತಂದುಕೊಟ್ಟು ಜಯದ ರೂವಾರಿಗಳೆನಿಸಿದರು.

ಮತ್ತೊಂದೆಡೆ ಲೀಗ್‌ನ ಸಾರ್ವಕಾಲಿಕ ಶ್ರೇಷ್ಠ ರೇಡರ್‌ ಹಾಗೂ ಪೈರೇಟ್ಸ್‌ ತಂಡದ ನಾಯಕ ಪರ್ದೀಪ್‌ ನರ್ವಾಲ್‌ ಕೇವಲ 6 ಅಂಕಗಳನ್ನು ಮಾತ್ರವೇ ಗಳಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣಗಗಳಲ್ಲಿ ಒಂದಾಯಿತು. ಸಾಮಾನ್ಯವಾಗಿ ಪರ್ದೀಪ್‌ ದಾಳಿಗಿಳಿದ ಪಂದ್ಯಗಳಲ್ಲಿ ಸರಾಸರಿ 10-15 ಅಂಕಗಳನ್ನು ಗಳಿಸಿ ಏಕಾಂಗಿಯಾಗಿ ಪಂದ್ಯಗಳನ್ನು ಗೆದ್ದುಕೊಡುತ್ತಿದ್ದರು. ಆದರೆ, ಈ ಬಾರಿ ಪಟನಾ 7 ಪಂದ್ಯಗಳನ್ನಾಡಿದ್ದರೂ ಒಮ್ಮೆಯೂ ಪರ್ದೀಪ್‌ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬಂದಿಲ್ಲ.

ಲೀಗ್‌ನಲ್ಲಿ ಒಟ್ಟು ಏಳು ಪಂದ್ಯಗಳನ್ನಾಡಿರುವ ಯು ಮುಂಬಾ 3 ಜಯ ಮತ್ತು 4 ಸೋಲಿನೊಂದಿಗೆ 18 ಅಂಕಗಳನ್ನು ಗಳಿಸಿದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅಷ್ಟೇ ಪಂದ್ಯಗಳನ್ನಾಡಿ 3 ಜಯ ನಾಲ್ಕು ಸೋಲು ಕಂಡಿರುವ ಪೈರೇಟ್ಸ್‌ 16 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

Story first published: Friday, August 16, 2019, 22:14 [IST]
Other articles published on Aug 16, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+