Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್ 2019: ಬೆಂಗಳೂರು ಬುಲ್ಸ್ ಕಟ್ಟಿ ಹಾಕಿದ ಯುಪಿ ಯೋಧ

Pro Kabaddi 2019: UP Yoddha beat Bengaluru Bulls

ಗ್ರೇಟರ್ ನೋಯ್ಡ, ಅಕ್ಟೋಬರ್ 11: ಉತ್ತರ ಪ್ರದೇಶದ ಗ್ರೇಟರ್ ನೋಯ್ಡದಲ್ಲಿರುವ ಶಾಹೀದ್ ವಿಜಯ್ ಸಿಂಗ್ ಪಾಠಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ (ಅಕ್ಟೋಬರ್ 11) ನಡೆದ ಪ್ರೊ ಕಬಡ್ಡಿ ಲೀಗ್ 132ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಯುಪಿ ಯೋಧ 45-33ರ ಜಯ ಗಳಿಸಿದೆ. ಅತ್ಯುತ್ತಮ ಡಿಫೆಂಡಿಂಗ್ ಕೌಶಲ ಯೋಧಗೆ ಸುಲಭ ಗೆಲುವು ತಂದಿತು.

ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್‌ನ ಪವನ್ ಕುಮಾರ್ ಶೆಹ್ರಾವತ್ ತಂಡಕ್ಕೆ ಅಂಕ ಸೇರಿಸಲು ಕೊಸರಾಡಿದರಾದರೂ ಎದುರಾಳಿ ತಂಡದ ರಕ್ಷಣಾತ್ಮಕ ಆಟ ಅದಕ್ಕೆ ಅನುವುಮಾಡಿ ಕೊಡಲಿಲ್ಲ. ಪವನ್ 13, ಸುಮಿತ್ ಸಿಂಗ್ 6, ಮಹೇಂದರ್ ಸಿಂಗ್ 4, ಸೌರಭ್ ನಂದಲ್ 2, ಅಮಿತ್ ಶಿಯೋರನ್ 2, ಬಂತಿ ಮತ್ತು ಅಂಕಿತ್ ತಲಾ 1 ಅಂಕ ಸೇರಿಸಿ ತಕ್ಕಮಟ್ಟಿನ ಪೈಪೋಟಿಗೆ ಕಾರಣರಾದರು.

ಯುಪಿ ಯೋಧಾದಿಂದ ಶ್ರೀಕಾಂತ್ ಜಾಧವ್ 9, ಸುರೇಂದರ್ ಗಿಲ್ 9, ಅಶು ಸಿಂಗ್ 5, ರಿಶಾಂಕ್ ದೇವಾಡಿಗ 4, ನಿತೇಶ್ ಕುಮಾರ್ 4, ಸುಮಿತ್ 2, ಅಮಿತ್ ಮತ್ತು ಸುರೇಂದರ್ ಸಿಂಗ್ ತಲಾ 1 ಪಾಯಿಂಟ್ ಸೇರಿಸಿ ತಂಡದ ಗೆಲುವನ್ನು ಬರೆದರು.

ಈ ಪಂದ್ಯದ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (85), ಬೆಂಗಾಲ್ ವಾರಿಯರ್ಸ್ (83), ಯು ಮುಂಬಾ (72), ಹರ್ಯಾಣ ಸ್ಟೀಲರ್ಸ್ (72), ಯುಪಿ ಯೋಧ (69), ಬೆಂಗಳೂರು ಬುಲ್ಸ್ (64) ಮೊದಲ 6 ಸ್ಥಾನಗಳಲ್ಲಿವೆ. ಅಕ್ಟೋಬರ್ 14ರಂದು ಯುಪಿ ಯೋಧ-ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ-ಹರ್ಯಾಣ ಸ್ಟೀಲರ್ಸ್ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ.

Story first published: Friday, October 11, 2019, 22:28 [IST]
Other articles published on Oct 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+