ಪ್ರೊ ಕಬಡ್ಡಿ 2019: ಸ್ಟೀಲರ್ಸ್ ಕೋಟೆಯಲ್ಲಿ ಬಂಧಿಯಾದ ಯು ಮುಂಬಾ

ಚೆನ್ನೈ, ಆಗಸ್ಟ್ 19: ಸ್ಟಾರ್ ರೇಡರ್ ವಿಕಾಸ್ ಕಂಡೋಲಾ ಅವರ ಅದ್ಭುತ ಆಟದ ನೆರವಿನಿಂದ ಮಿಂಚಿದ ಹರಿಯಾಣ ಸ್ಟೀಲರ್ಸ್ ತಂಡ, ಪ್ರೊ ಕಬಡ್ಡಿ 2019ರ ಟೂರ್ನಿಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ ತಂಡವನ್ನು ಮಣಿಸಿ ತನ್ನ ಪ್ಲೇ ಆಫ್ಸ್ ಕನಸನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದೆ.
ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಪಡೆ 30-27 ಅಂಕಗಳಿಂದ ಮಾಜಿ ಚಾಂಪಿಯನ್ಸ್ ಯು ಮುಂಬಾದ ಕಠಿಣ ಸವಾಲನ್ನು ಮೆಟ್ಟಿ ನಿಂತಿತು.
ಸ್ಟೀಲರ್ಸ್ ಪರ ಮಿಂಚಿದ ವಿಕಾಸ್ ಕಂಡೋಲಾ ಒಟ್ಟು 9 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಮತ್ತೊಂದೆಡೆ ನಿರ್ಣಾಯಕ ಹಂತಗಳಲ್ಲಿ ಮುಂಬೈ ತಂಡ ಮಾಡಿಕೊಂಡ ಕೆಲ ಎಡವಟ್ಟುಗಳಿಂದಾಗಿ ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ನಿರಾಸೆ ಎದುರಿಸುವಂತಾಯಿತು. ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ತಲಾ 4 ಸೋಲು ಮತ್ತು ಗೆಲುವಿನ ದಾಖಲೆ ಹೊಂದಿದ್ದವು.
ಈ ಜಯದೊಂದಿಗೆ ಧರ್ಮರಾಜ್ ಚೇರಲಾಥನ್ ಸಾರಥ್ಯದ ಸ್ಟೀಲರ್ಸ್ ತಂಡ ಒಟ್ಟು 26 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮತ್ತೊಂದೆಡೆ 9 ಪಂದ್ಯಗಳಲ್ಲಿ 24 ಅಂಕಗಳನ್ನು ಕಲೆಹಾಕಿರುವ ಯು ಮುಂಬಾ 6ನೇ ಸ್ಥಾನದಲ್ಲಿ ಉಳಿದಿದೆ.
ದ್ವಿತೀಯಾರ್ಧದದಲ್ಲಿ ಮುಂಬಾ ತಿರುಗೇಟು
ಪಂದ್ಯದ ಮೊದಲ ಅವಧಿಯಲ್ಲಿ ಅಕ್ಷರಶಃ ಪ್ರಾಬಲ್ಯ ಮೆರದಿದ್ದ ಹರಿಯಾಣ ಸ್ಟೀಲರ್ಸ್ ತಂಡ 16-8 ಅಂತರದಲ್ಲಿ ಭಾರಿ ಮುನ್ನಡೆಯನ್ನೇ ಗಳಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಅಭಿಷೇಕ್ ಸಿಂಗ್ (6), ಸಂದೀಪ್ ನರ್ವಾಲ್ (5) ಹಾಗೂ ನಾಯಕ ಫಝಲ್ ಅತ್ರಾಚಲಿ (4) ಅವರ ಭರ್ಜರಿ ಆಟದ ನೆರವಿನಿಂದ ತಿರುಗೇಟು ನೀಡಿದ ಮುಂಬಾ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications