Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ಬೆಂಗಳೂರು ಬುಲ್ಸ್‌ಗೆ ಇಂದು ತಮಿಳ್ ತಲೈವಾಸ್ ಸವಾಲು, ಪಂದ್ಯದ ಸಮಯ ಹಾಗೂ ಇತರ ಮಾಹಿತಿ

Pro Kabaddi 2022: Bengaluru Bulls vs Tamil Thalaivas, match preview, squads and Other details

ಪ್ರೊ ಕಬಡ್ಡಿ ಲೀಗ್‌ನಲ್ಲಿ ಇಂದು ಬೆಂಗಳೂರು ಬುಲ್ಸ್ ತಂಡ ಕಣಕ್ಕಿಳಿಯಲಿದ್ದು ತಮಿಳ್ ತಲೈವಾಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಬಾರಿಯ ಉತ್ತಮ ಆರಂಭವನ್ನು ಪಡೆದರು ಕಳೆದ ಎರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಹೀಗಾಗಿ ತಮಿಳ್ ತಲೈವಾಸ್ ವಿರುದ್ಧದ ಈ ಪಂದ್ಯವನ್ನು ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.

ಈ ಬಾರಿಯ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಬೆಂಗಳೂರು ಬುಲ್ಸ್ ತಂಡ ನಂತರದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಬುಲ್ಸ್ ತಂಡದ ಪ್ರಮುಖ ರೈಡರ್‌ಗಳಾಗಿರುವ ವಿಕಾಶ್ ಕಂಡೋಲ ಮತ್ತು ಭರತ್ ಮೇಲೆ ಸಾಕಷ್ಟು ಜವಾಬ್ಧಾರಿಗಳಿದೆ. ಕಾಂಡೋಲಾ 35 ರೇಡ್ ಪಾಯಿಂಟ್‌ಗಳೊಂದಿಗೆ ತಂಡದ ಅತ್ಯುತ್ತಮ ಆಟಗಾರ ಎನಿಸಿಕೊಂಡಿದ್ದರೆ ಭರತ್ ಈ ಆವೃತ್ತಿಯಲ್ಲಿ 34 ರೇಡ್ ಪಾಯಿಂಟ್‌ಗಳನ್ನು ಗಳಿಸಿಕೊಂಡಿದ್ದಾರೆ.

ಬೆಂಗಳೂರು ಬುಲ್ಸ್ ತಂಡದ ಈವರೆಗಿನ ಫಲಿತಾಂಶ
ತೆಲುಗು ಟೈಟಾನ್ಸ್ ವಿರುದ್ಧ 34-29 ಅಂತರದ ಗೆಲುವು
ಪುಣೇರಿ ಪಲ್ಟಾನ್ ವಿರುದ್ಧ 41-39 ಅಂತರದ ಗೆಲುವು
ಬೆಂಗಾಲ್ ವಾರಿಯರ್ಸ್ ವಿರುದ್ಧ 33-42 ಅಂತರದ ಸೋಲು
ಯುಪಿ ಯೋಧಾಸ್ ವಿರುದ್ಧ 37-44 ಅಂತರದ ಸೋಲು

ತಮಿಳು ತಲೈವಾಸ್ ತಂಡದ ಈವರೆಗಿನ ಫಲಿತಾಂಶ
ಗುಜರಾತ್ ಜೈಂಟ್ಸ್ ವಿರುದ್ಧ 31-31 ಅಂಕಗಳಿಂದ ಡ್ರಾ
ಹರಿಯಾಣ ಸ್ಟೀಲರ್ಸ್ ವಿರುದ್ಧ 22-27 ಅಂತರದಿಂದ ಸೋಲು
ಯು ಮುಂಬಾ ವಿರುದ್ಧ 32-39 ಅಂತರದಿಂದ ಸೋಲು
ಪಾಟ್ನಾ ಪೈರೇಟ್ಸ್ ವಿರುದ್ಧ 33-32 ಅಂತರದಿಂದ ಗೆಲುವು

ಬೆಂಗಳೂರು ಬುಲ್ಸ್
ರೈಡರ್ಸ್: ವಿಕಾಶ್ ಕಾಂಡೋಲಾ, ಭರತ್, ನೀರಜ್ ನರ್ವಾಲ್, ಮೋರ್ ಜಿ ಬಿ, ಹರ್ಮನ್‌ಜೀತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ಹರ್ಮನ್ಜೀತ್ ಸಿಂಗ್,
ಡಿಫೆಂಡರ್ಸ್: ಮಯೂರ್ ಕದಮ್, ಮಹೇಂದರ್ ಸಿಂಗ್, ಅಮನ್, ಸೌರಭ್ ನಂದಲ್, ರಜನೇಶ್, ಯಶ್ ಹೂಡಾ, ನಾಯಕ್, ರೋಹಿತ್ ಕುಮಾರ್, ಸುಧಾಕರ್ ಕ್ರಿಶಾಂತ್
ಆಲ್‌ರೌಂಡರ್‌ಗಳು: ರಾಹುಲ್ ಖಟಿಕ್, ಸಚಿನ್ ನರ್ವಾಲ್, ರಾಜೇಶ್ ನರ್ವಾಲ್, ನರೇಂದರ್ ಹೂಡಾ

ತಮಿಳು ತಲೈವಾಸ್
ರೈಡರ್ಸ್: ಪವನ್ ಕುಮಾರ್ ಸೆಹ್ರಾವತ್, ಅಜಿಂಕ್ಯ ಅಶೋಕ್ ಪವಾರ್, ಸಚಿನ್, ಹಿಮಾಂಶು ನರ್ವಾಲ್, ಹಿಮಾಂಶು ಸಿಂಗ್, ನರೇಂದರ್.
ಡಿಫೆಂಡರ್ಸ್: ಸಾಗರ್, ಅಂಕಿತ್, ಎಂ ಅಭಿಷೇಕ್, ಆಶಿಶ್, ಎಂಡಿ ಆರಿಫ್ ರಬ್ಬಾನಿ, ಹಿಮಾಂಶು, ಮೋಹಿತ್, ಸಾಹಿಲ್ ಗುಲಿಯಾ, ಅರ್ಪಿತ್ ಸರೋಹಾ.
ಆಲ್ ರೌಂಡರ್ಸ್: ವಿಶ್ವನಾಥ್ ವಿ, ತನುಶನ್ ಲಕ್ಷ್ಮಮೋಹ, ಕೆ ಅಭಿಮನ್ಯು.

Story first published: Wednesday, October 19, 2022, 17:35 [IST]
Other articles published on Oct 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+