For Quick Alerts
ALLOW NOTIFICATIONS  
For Daily Alerts

Pro Kabaddi 2023: ಪ್ಯಾಂಥರ್ಸ್‌ ಮಣಿಸಿದ ಬೆಂಗಳೂರಿಗೆ ಮೂರನೇ ಸ್ಥಾನ

ಸ್ಟಾರ್ ರೇಡರ್‌ಗಳಾದ ವಿಕಾಸ್ ಕಂಡೋಲಾ ಹಾಗೂ ಭರತ್ ಅವರ ಅಮೋಘ ದಾಳಿಯ ನೆರವಿನಿಂದ ಬೆಂಗಳೂರು ಬುಲ್ಸ್‌ 32-30ರಿಂದ ಜೈಪೂರ್ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿ, 2023ರ ಪ್ರೊ ಕಬಡ್ಡಿ ಲೀಗ್‌ನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಆಡಿದ ಆರು ಪಂದ್ಯಗಳಲ್ಲಿ 2 ಜಯ ಸಾಧಿಸಿ, 4 ಸೋಲು ಕಂಡಿದೆ. ಅಲ್ಲದೆ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Pro Kabaddi 2023: Bengaluru Bulls Beat Jaipur Pink Panthers

ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್‌ ಮುನ್ನಡೆ ಸಾಧಿಸಿತು. ಈ ಅವಧಿಯ 10ನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್ ಆಯಿತು. ಮೊದಲ ಹಂತದಲ್ಲಿ ಬೆಂಗಳೂರು 14-17 ಅಂಕಗಳೊಂದಿಗೆ ಹಿನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಎರಡೂ ತಂಡಗಳು ತಲಾ 9 ರೇಡ್‌ ಪಾಯಿಂಟ್ ಕಲೆ ಹಾಕಿತು. ಟ್ಯಾಕಲ್‌ನಲ್ಲಿ ಜೈಪೂರ್‌ 6 ಅಂಕ ಕಲೆ ಹಾಕಿತು. ಬುಲ್ಸ್‌ 5 ಅಂಕ ಸೇರಿಸಿತು.

ಎರಡನೇ ಅವಧಿಯಲ್ಲಿ ಬುಲ್ಸ್‌ ಅಬ್ಬರಿಸಿತು. ಬೆಂಗಳೂರು ಈ ಅವಧಿಯಲ್ಲಿ ಅಮೋಘ ಪ್ರದರ್ಶನ ನೀಡಿತು. ಕೊನೆಯ 20 ನಿಮಿಷದಲ್ಲಿ ಬೆಂಗಳೂರು 18-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲೂ ಉಭಯ ತಂಡಗಳು ತಲಾ ಏಳು ಅಂಕಗಳನ್ನು ದಾಳಿಯಲ್ಲಿ ಕಲೆ ಹಾಕಿದವು.

Pro Kabaddi 2023: Bengaluru Bulls Beat Jaipur Pink Panthers

ಬೆಂಗಳೂರು ಬುಲ್ಸ್‌ 40 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 13 ಅಂಕಗಳನ್ನು ಕಲೆ ಹಾಕಿತು. ಇಷ್ಟೇ ಅವಕಾಶದಲ್ಲಿ ಜೈಪೂರ್‌ 11 ಅಂಕಗಳನ್ನು ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ ಬೆಂಗಳೂರು 13, ಜೈಪೂರ್‌ 8 ಅಂಕಗಳನ್ನು ಕಲೆ ಹಾಕಿತು.

ಬೆಂಗಳೂರು ತಂಡದ ಪರ ಸ್ಟಾರ್ ರೇಡರ್‌ ವಿಕಾಸ್ ಕಂಡೋಲಾ 8 ಹಾಗೂ ಭರತ್ 9 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಪರಾಜಿತ ತಂಡದ ಪರ ವಿ.ಅಜೀತ್‌ 9 ಅಂಕ ಸೇರಿಸಿದರು.

Pro Kabaddi 2023: Bengaluru Bulls Beat Jaipur Pink Panthers

ತಮಿಳು ತಲೈವಾಸ್‌ಗೆ ಜಯ

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ತಮಿಳು ತಲೈವಾಸ್ 38-36 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿತು. ತೆಲುಗು ಸತತ ನಾಲ್ಕು ಪಂದ್ಯ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ. ವಿಜೇತ ತಂಡದ ಪರ ನರೇಂದ್ರ 10 ಅಂಕಗಳನ್ನು ಕಲೆ ಹಾಕಿ ಮಿಂಚಿದರು.

Story first published: Thursday, December 14, 2023, 6:00 [IST]
Other articles published on Dec 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+