For Quick Alerts
ALLOW NOTIFICATIONS  
For Daily Alerts

Pro Kabaddi 2023: ತಲೈವಾಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಕೊನೆಯ ಕ್ಷಣದ ವರೆಗೂ ರೋಚಕತೆ ಹುಟ್ಟಿಸಿದ್ದ ಬೆಂಗಳೂರು ಬುಲ್ಸ್ ಹಾಗೂ ತಮಿಳು ತಲೈವಾಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ವಿಕಾಸ್ ಕಂಡೋಲಾ ಅವರ ಭರ್ಜರಿ ಪ್ರದರ್ಶನದ ಬಲದಿಂದ ಬೆಂಗಳೂರು ಬುಲ್ಸ್‌ 38-37 ರಿಂದ ತಮಿಳು ತಲೈವಾಸ್‌ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಜಯದೊಂದಿಗೆ ಬೆಂಗಳೂರು ಬುಲ್ಸ್‌ ಅಡಿದ 10 ಪಂದ್ಯಗಳಲ್ಲಿ 4 ಜಯ ಹಾಗೂ 6 ಸೋಲು ಕಂಡಿದ್ದು 25 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

Pro Kabaddi 2023: Bengaluru Bulls Beat Tamil Thalaivas

ಮೊದಲಾವಧಿಯಲ್ಲಿ ಹಿನ್ನಡೆ ಅನುಭಿಸಿದ್ದ ಬುಲ್ಸ್ ಎರಡನೇ ಅವಧಿಯಲ್ಲಿ ಮನಮೋಹಕ ಪ್ರದರ್ಶನ ನೀಡಿತು. ಮೊದಲ 20 ನಿಮಿಷದಲ್ಲಿ ಬುಲ್ಸ್ 17-20 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಎದುರಾಳಿ ತಂಡ ರೇಡ್‌ನಲ್ಲಿ 13 ಅಂಕ ಕಲೆ ಹಾಕಿದರೆ, ಬುಲ್ಸ್ ತಂಡ ಟ್ಯಾಕಲ್‌ನಲ್ಲಿ 7 ಅಂಕ ಪೇರಿಸಿತು. ಈ ಅವಧಿಯಲ್ಲಿ ಬುಲ್ಸ್ ತಂಡದ ಅಂಗಳ ಒಮ್ಮೆ ಖಾಲಿ ಆಗಿದ್ದರಿಂದ ತಲೈವಾಸ್ ಬೋನಸ್ ಅಂಕವನ್ನು ಸಹ ಪಡೆಯಿತು.

ಎರಡನೇ ಅವಧಿಯ ಆಟ ರೋಚಕತೆಯಿಂದ ಕೂಡಿತ್ತು. ಉಭು ತಂಡಗಳು ಅಂಕಗಳನ್ನು ಸುಲಭವಾಗಿ ಬಿಟ್ಟು ಕೊಡಲಿಲ್ಲ. ಬೆಂಗಳೂರು ಈ ಅವಧಿಯಲ್ಲಿ ರೇಡ್ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ಕೊನೆಯ ಕ್ಷಣದಲ್ಲಿ ಅಂಕಗಳನ್ನು ಬಾಚಿಕೊಂಡು, ಎದುರಾಳಿಗೆ ಅಂಕ ನೀಡದೆ ಅಬ್ಬರಿಸಿತು. ಕೊನೆಯ 20 ನಿಮಿಷದ ಆಟದಲ್ಲಿ ಬುಲ್ಸ್ 21-17 ಅಂಕಗಳೊಂದಿಗೆ ತಲೈವಾಸ್‌ ವಿರುದ್ಧ ಮೇಲುಗೈ ಸಾಧಿಸಿ ಪಂದ್ಯವನ್ನು ಗೆದ್ದಿತು.

Pro Kabaddi 2023: Bengaluru Bulls Beat Tamil Thalaivas

ಒಟ್ಟಾರೆ ಬುಲ್ಸ್ ಹಾಗೂ ತಲೈವಾಸ್ ತಂಡಗಳ ರೇಡ್‌ ಉತ್ತಮವಾಗಿತ್ತು. ಉಭಯ ತಂಡಗಳು ತಲಾ 17 ಅಂಕಗಳನ್ನು ದಾಳಿಯಲ್ಲಿ ಗಳಿಸಿದವು. ಬುಲ್ಸ್‌ 24 ಪ್ರಯತ್ನದಲ್ಲಿ 11 ಬಾರಿ ತಲೈವಾಸ್ ರೈಡರ್‌ನನ್ನು ಕಟ್ಟಿ ಹಾಕುವಲ್ಲಿ ಸಫಲವಾಯಿತು.

ಬುಲ್ಸ್ ತಂಡದ ಪರ ಭರತ್ ದಾಳಿಯಲ್ಲಿ 9 ಅಂಕ ಕಲೆ ಹಾಕಿದರು. ಉಳಿದಂತೆ ಆಟಗಾರರು ಸಂಘಟಿತ ಆಟದ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದರು. ತಲೈವಾಸ್ ತಂಡದ ಪರ ನರೇಂದ್ರ 12 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

ಗುಜರಾತ್‌ಗೆ ಜಯ

ಇದಕ್ಕೂ ಮೊದಲು ನಡೆದ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 49ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 51-42ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಜಯದೊಂದಿಗೆ ಗುಜರಾತ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.

ಮೊದಲಾವಧಿಯಲ್ಲಿ ಗುಜರಾತ್ ತಂಡ ಕಂಡು ಕೊಂಡ ಅಂಕಗಳ ಮುನ್ನಡೆ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿತು. ಗುಜರಾತ್ ಪರ ದೀಪಕ್ ದಹಿಯಾ 25 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಬೆಂಗಾಲ್ ಪರ ಮನಿಂದರ್ ಸಿಂಗ್ 11, ನಿತೀನ್ ಕುಮಾರ್ 12 ಅಂಕ ಬಾಚಿಕೊಂಡರು.

Story first published: Monday, January 1, 2024, 8:50 [IST]
Other articles published on Jan 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+