Pro Kabaddi 2023: ಬುಲ್ಸ್ ಆಟಕ್ಕೆ ಬೆಚ್ಚಿದ ಯುಪಿ ಯೋಧಾಸ್
ತವರಿನಲ್ಲಿ ಅಂಗಳದಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಆರಂಭವನ್ನು ಮಾಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಬುಲ್ಸ್ ಅಮೋಘ ಪ್ರದರ್ಶನವನ್ನು ನೀಡಿ ಯು.ಪಿಯೋಧಾಸ್ ತಂಡವನ್ನು ಮಣಿಸಿದೆ.
ಸೋಮವಾರ ಶ್ರೀ ಕಂಠೀರವಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 38-36 ರಿಂದ ಯೋಧಾಸ್ ತಂಡವನ್ನು ಸೋಲಿಸಿತು. ಈ ಮೂಲಕ ಬೆಂಗಳೂರು ಟೂರ್ನಿಯಲ್ಲಿ ಮೊದಲ ಜಯದ ನಗೆ ಬೀರಿದೆ.
ಪಂದ್ಯದ ಮೊದಲಾವಧಿಯಲ್ಲಿ ಯುಪಿ ತಂಡ ಅಬ್ಬರಿಸಿತು. ಆದರೆ 10ನೇ ನಿಮಿಷದ ಆಟದಿಂದ ಬುಲ್ಸ್ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆರ್ಭಟ ನಡೆಸಿತು. ಈ ಹಂತದಲ್ಲಿ ರೇಡ್ ಹಾಗೂ ಟ್ಯಾಕಲ್‌ನಲ್ಲಿ ಬುಲ್ಸ್ ಉತ್ತಮ ಪ್ರದರ್ಶನ ನೀಡಿ 11ನೇ ನಿಮಿಷದಲ್ಲಿ ಎದುರಾಳಿ ಅಂಗಳವನ್ನು ಖಾಲಿ ಮಾಡಿತು. ಈ ಅವಧಿಯಲ್ಲಿ ಬುಲ್ಸ್ 21-14 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು.

ಎರಡನೇ ಅವಧಿಯ ಆರಂಭದಲ್ಲಿ ಯೋಧಾಸ್ ತಂಡವನ್ನು ಬುಲ್ಸ್ ಮತ್ತೊಮ್ಮೆ ಆಲೌಟ್ ಮಾಡಿತು. ಈ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಯು.ಪಿ ಅಂಕ ಬೇಟೆಗೆ ಚುರುಕು ಮುಟ್ಟಿಸಿತು. ಅಲ್ಲದೆ ಈ ಅವಧಿಯಲ್ಲಿ ಬೆಂಗಳೂರು ಒಮ್ಮೆ ಅಂಗಳ ಖಾಲಿ ಮಾಡಿ, ಎದುರಾಳಿ ತಂಡಕ್ಕೆ ಬೋನಸ್ ಅಂಕ ನೀಡಿತು.
ಬೆಂಗಳೂರು ತಂಡ ಒಟ್ಟಾರೆ 43 ರೇಡ್ ಮಾಡಿ 18 ಅಂಕ ಕಲೆ ಹಾಕಿತು. ಯು.ಪಿ ಇಷ್ಟೇ ರೇಡ್ ಗಳಲ್ಲಿ 20 ಅಂಕ ಸೇರಿಸಿತು. ಬೆಂಗಳೂರು ಬುಲ್ಸ್ ಈ ಪಂದ್ಯದಲ್ಲಿ ಎರಡು ಬಾರಿ ಸೂಪರ್ ರೇಡ್ ಮಾಡಿ ಗಮನ ಸೆಳೆಯಿತು. ಈ ಪಂದ್ಯದಲ್ಲಿ ಬುಲ್ಸ್ ತಂಡದ ರಕ್ಷಣಾತ್ಮಕ ಆಟ ಸೊಗಸಾಗಿತ್ತು. ಬುಲ್ಸ್ 28 ಬಾರಿ ಎದುರಾಳಿ ಆಟಗಾರರನ್ನು ಹಿಡಿಯಲು ಪ್ರಯತ್ನಿಸಿ 9 ರಲ್ಲಿ ಯಶ ಕಂಡಿತು. ಈ ಒಂದು ಪ್ರಯತ್ನದಲ್ಲಿ ಯು.ಪಿ ಹಿಂದೆ ಬಿದ್ದಿತು.

ಬೆಂಗಳೂರು ತಂಡದ ಸ್ಟಾರ್ ರೇಡರ್ ವಿಕಾಸ್ ಕಂಡೋಲಾ ಅಬ್ಬರಿಸಿದರು. ಒಟ್ಟು 16 ಬಾರಿ ಎದುರಾಳಿ ಕೋರ್ಟ್‌ಗೆ ಲಗ್ಗೆ ಇಟ್ಟ ಇವರು ಒಟ್ಟು 11 ಅಂಕಗಳನ್ನು ಕಲೆ ಹಾಕಿದರು. ಇದರಲ್ಲಿ 8 ಟಚ್ ಪಾಯಿಂಟ್, 3 ಬೋನಸ್ ಪಾಯಿಂಟ್ ಸೇರಿವೆ. ಬೆಂಗಳೂರು ತಂಡದ ಇನ್ನೋರ್ವ ಸ್ಟಾರ್ ರೇಡರ್ ಭರತ್, ವಿಕಾಸ್‌ಗೆ ಉತ್ತಮ ಸಾಥ್ ನೀಡಿದರು. ಇವರು ಸಹ 11 ಅಂಕಗಳನ್ನು ಕಲೆ ಹಾಕಿದರು.
ಜೈಂಟ್ಸ್ ಸವಾಲು ಗೆದ್ದ ಪ್ಯಾಂಥರ್ಸ್
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ 35-32 ರಿಂದ ಗುಜರಾತ್ ಜೈಂಟ್ಸ್ ಸವಾಲು ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಜೈಪೂರ್ ಏಳನೇ ಸ್ಥಾನದಲ್ಲಿದೆ. ಇನ್ನು ಪಂದ್ಯವನ್ನು ಸೋತರೂ ಗುಜರಾತ್ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಅರ್ಜುನ್ ದೇಶ್ವಾಲ್ ಪ್ರೊ ಕಬಡ್ಡಿ ಲೀಗ್‌ನಲ್ಲಿ 700 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications