Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi 2023: ಆಶು ಮಲಿಕ್, ಮಂಜಿತ್ ಅಬ್ಬರ, ದಬಾಂಗ್ ದೆಹಲಿಗೆ ಜಯ

10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 53ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ ತಂಡ 35-28 ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ, ಅಬ್ಬರಿಸಿದೆ.

ಗುಜರಾತ್ ಜೈಂಟ್ಸ್ ಮಣಿಸಿದ ದಬಾಂಗ್ ದೆಹಲಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ದೆಹಲಿ ತಂಡ ಆಡಿದ 9 ಪಂದ್ಯಗಳಲ್ಲಿ 5 ಜಯ, ಮೂರು ಸೋಲು, 1 ಡ್ರಾ ಸಾಧಿಸಿದ್ದು, 30 ಅಂಕಗಳನ್ನು ಕಲೆ ಹಾಕಿದೆ.

ಈ ಸೋಲಿನ ಹೊರತಾಗಿಯೂ ಗುಜರಾತ್ ಜೈಂಟ್ಸ್ ತಂಡ ಆಡಿದ 10 ಪಂದ್ಯಗಳಲ್ಲಿ 6 ಜಯ, 4 ಸೋಲು ಕಂಡಿದ್ದು 34 ಅಂಕ ಕಲೆ ಹಾಕಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುವ ಗುಜರಾತ್ ಜೈಂಟ್ಸ್ ಕನಸು ಕಮರಿದೆ.

Pro Kabaddi 2023: Dabang Delhi K.C. Beat Gujarat Giants

ಮೊದಲಾವಧಿಯ ಆಟದಲ್ಲಿ ಗುಜರಾತ್ ಜೈಂಟ್ಸ್ ಭರ್ಜರಿ ಪ್ರದರ್ಶನ ನೀಡಿ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಪ್ರದರ್ಶನ ನೀಡಿದ ಗುಜರಾತ್ 16-14 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದಬಾಂಗ್ ತಂಡ ಒಂದು ಬಾರಿ ಅಂಗಳವನ್ನು ಖಾಲಿ ಮಾಡಿತು.

ಕೊನೆಯ 20 ನಿಮಿಷದ ಆಟದಲ್ಲಿ ದಬಾಂಗ್ ದೆಹಲಿ ತಂಡ ಅಬ್ಬರದ ಆಟದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ದಾಳಿಯಲ್ಲಿ 12 ಹಾಗೂ ಟ್ಯಾಕಲ್‌ನಲ್ಲಿ ದಬಾಂಗ್ ತಂಡ 6 ಅಂಕವನ್ನು ಕಲೆ ಹಾಕಿತು. ಅಲ್ಲದೆ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಗುಜರಾತ್ ಜೈಂಟ್ಸ್ ತಂಡವನ್ನು ಒಮ್ಮೆ ಆಲೌಟ್ ಮಾಡಿತು.

ಪಂದ್ಯದಲ್ಲಿ ಒಟ್ಟು ಗುಜರಾತ್ 40 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 16 ಅಂಕ ಸೇರಿಸಿದರೆ, ದಬಾಂಗ್ 39 ಬಾರಿ ಎದುರಾಳಿ ಅಂಗಳ ಪ್ರವೇಶಿಸಿ 18 ಅಂಕ ಸಂಪಾದಿಸಿತು. ಇನ್ನು ದಬಾಂಗ್ ದೆಹಲಿ 21 ಬಾರಿ ಎದುರಾಳಿ ರೈಡರ್‌ನನ್ನು ಹಿಡಿಯುವ ಪ್ರಯತ್ನದಲ್ಲಿ 8 ಬಾರಿ ಯಶಸ್ವಿಯಾಯಿತು. ಇಷ್ಟೇ ಪ್ರಯತ್ನದಲ್ಲಿ ಗುಜರಾತ್ ಜೈಂಟ್ಸ್ ತಂಡ 6 ಅಂಕ ಕಲೆ ಹಾಕಿತು.

ವಿಜೇತ ತಂಡದ ಪರ ಆಶು ಮಲಿಕ್ 18 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಟಚ್ ಪಾಯಿಂಟ ಸೇರಿದಂತೆ ಒಟ್ಟು 11 ಅಂಕ ಕಲೆ ಹಾಕಿತು. ಮಂಜೀತ್ 12 ಬಾರಿ ದಾಳಿ ನಡೆಸಿ 4 ಟಚ್ ಪಾಯಿಂಟ್, 5 ಬೋನಸ್ ಅಂಕ ಪೇರಿಸಿದರು. ಪರಾಜಿತ ತಂಡದ ಪರ ಪ್ರತೀಕ್ ದಹಿಯಾ 17 ಬಾರಿ ದಬಾಂಗ್ ಕೋರ್ಟ್‌ಗೆ ಎಂಟ್ರಿ ನೀಡಿ 9 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

Story first published: Wednesday, January 3, 2024, 6:00 [IST]
Other articles published on Jan 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+