For Quick Alerts
ALLOW NOTIFICATIONS  
For Daily Alerts

Pro Kabaddi 2023: ಜೈಪೂರ್‌ಗೆ 2, ಗುಜರಾತ್‌ಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ

10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡುತ್ತಿರುವ ಗುಜರಾತ್ ಜೈಂಟ್ಸ್‌ ಭರ್ಜರಿ ಪ್ರದರ್ಶನ ನೀಡಿ ಬುಧವಾರ ನಡೆದ ಪಂದ್ಯದಲ್ಲಿ ಜಯ ಸಾಧಿಸಿವೆ.

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ತಂಡ 33-30 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಗುಜರಾತ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 5 ಜಯ ದಾಖಲಿಸಿದ್ದು, 28 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಲೈವಾಸ್ ಮೂರನೇ ಗೆಲುವಿನ ಕನಸು ಮುಂದಿನ ಪಂದ್ಯಕ್ಕೆ ಶಿಫ್ಟ್ ಆಗಿದೆ.

Pro Kabaddi 2023: Gujarat Giants Beat Tamil Thalaivas

ಮೊದಲಾವಧಿಯ ಆಟ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು ಸುಲಭವಾಗಿ ಅಂಕಗಳನ್ನು ಬಿಟ್ಟುಕೊಡಲಿಲ್ಲ. ಆದರೆ ಗುಜರಾರ್ ಈ ಅವಧಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಮೂರು ಅಂಕಗಳ ಮುನ್ನಡೆ ಸಾಧಿಸಿತು. ಅಲ್ಲದೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಉಭಯ ತಂಡಗಳ ಆಟ ಉತ್ತಮವಾಗಿತ್ತು.

ಎರಡನೇ ಅವಧಿಯ ಆಟದಲ್ಲಿ ಉಭಯ ತಂಡಗಳು ತಲಾ 17 ಅಂಕಗಳನ್ನು ಬಾಚಿಕೊಂಡವು. ಈ ಅವಧಿಯಲ್ಲಿ ತಲೈವಾಸ್ ಭರ್ಜರಿ ರೇಡ್‌ಗವಳನ್ನು ಮಾಡಿ ಮಿಂಚಿತು. ಟ್ಯಾಕಲ್‌ನಲ್ಲಿ ಎರಡೂ ತಂಡಗಳ ಆಟ ಸ್ಥಿರವಾಗಿತ್ತು. ಆದರೆ ಒಂದು ಬಾರಿ ತಲೈವಾಸ್‌ ಅಂಗಳವನ್ನು ಖಾಲಿ ಮಾಡಿದ್ದು ತಂಡಕ್ಕೆ ಪೆಟ್ಟು ಬಿದ್ದಿತು.

Pro Kabaddi 2023: Gujarat Giants Beat Tamil Thalaivas

ಗುಜರಾತ್ ಪರ ರೈಡರ್ ರಾಕೇಶ್ 9 ಅಂಕ ಕಲೆ ಹಾಕಿದರೆ, ಡಿಫೆಂಡರ್ ಸೊಂಬಿರ್ 4 ಅಂಕ ಸೇರಿಸಿದರು. ತಲೈವಾಸ್ ಪರ ಅಜಿಂಕ್ಯಾ ಪವಾರ 11 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

ಜೈಪೂರ್, ದಬಾಂಗ್ ಪಂದ್ಯ ಡ್ರಾ

ಇದಕ್ಕೂ ಮೊದಲು ನಡೆದ 43ನೇ ಪಂದ್ಯದಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್‌ ಹಾಗೂ ದಬಾಂಗ್ ದೆಹಲಿ ಕೆಸಿ ತಂಡಗಳು ತಲಾ 32 ಅಂಕಗಳನ್ನು ಕಲೆ ಹಾಕಿ ಡ್ರಾ ಸಾಧಿಸಿದವು. ಈ ಮೂಲಕ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡವು. ಈ ಮೂಲಕ ಜೈಪೂರ್ ಆಡಿದ 8 ಪಂದ್ಯಗಳಲ್ಲಿ 4 ಜಯ, 2 ಸೋಲು, 2 ಡ್ರಾ ಸಾಧಿಸಿದ್ದು 28 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ದಬಾಂಗ್ ದೆಹಲಿ ತಂಡ ಮೂರು ಅಂಕಗಳೊಂದಿಗೆ 20 ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಹೊಂದಿದೆ.

Pro Kabaddi 2023: Gujarat Giants Beat Tamil Thalaivas

ಜೈಪೂರ್ ತಂಡದ ಪರ ಅರ್ಜುನ್ ದೇಶ್ವಾಲ್ ರೇಡ್‌ನಲ್ಲಿ 13 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಲೆಫ್ಟ್‌ ಕಾರ್ನರ್ ರಕ್ಷಣಾ ಆಟಗಾರ ಅಂಕುಶ್ 7 ಅಂಕ ಬಾಚಿಕೊಂಡರು. ದಬಾಂಗ್ ಪರ ಆಶು ಮಲಿಕ್ 7 ಅಂಕ ಸಂಪಾದಿಸಿದರು.

Story first published: Wednesday, December 27, 2023, 23:43 [IST]
Other articles published on Dec 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+