Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi 2023: ಹರಿಯಾಣ ಸ್ಟೀಲರ್ಸ್‌ಗೆ ಜಯ

10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 31ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ 31-29ರಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹರಿಯಾಣ ಆಡಿದ ಐದು ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದಲ್ಲಿ ಸೋಲು ಅನುಭವಿಸಿದರೂ ಗುಜರಾತ್ ಜೈಂಟ್ಸ್‌ 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಹರಿಯಾಣ ಮೊದಲಾವಧಿಯ ಪಂದ್ಯದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಲ್ಲದೆ ಎದುರಾಳಿ ತಂಡದ ತಂತ್ರವನ್ನು ಅರಿತು ಆಡಿತು. ಪರಿಣಾಮ ಅಂಕದ ಬೇಟೆಯಲ್ಲಿ ಭಾರೀ ಮುನ್ನಡೆ ಸಾಧಿಸಿತು. ಹರಿಯಾಣ ಮೊದಲ 20 ನಿಮಿಷದ ಅವಧಿಯಲ್ಲಿ 17-10 ಅಂಕಗಳೊಂದಿಗೆ ಮುನ್ನಡೆ ಪಡೆಯಿತು.

 Pro Kabaddi 2023: Haryana Steelers Beat Gujarat Giants

ಈ ಅವಧಿಯಲ್ಲಿ ಹರಿಯಾಣ ದಾಳಿಯಲ್ಲಿ 9 ಹಾಗೂ ಟ್ಯಾಕಲ್‌ನಲ್ಲಿ 6 ಅಂಕ ಕಲೆ ಹಾಕಿತು. ಅಲ್ಲದೆ ಒಂದು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿ ಅಂಕಗಳನ್ನು ಬಾಚಿಕೊಂಡಿತು.

ಕೊನೆಯ 20 ನಿಮಿಷದ ಆಟದಲ್ಲಿ ಭಿನ್ನ ತಂತ್ರಗಾರಿಕೆಯಿಂದ ಕಣಕ್ಕೆ ಇಳಿದ ಗುಜರಾತ್‌, ಹರಿಯಾಣ ಮೇಲೆ ಸವಾರಿ ಮಾಡಲು ಮುಂದಾಯಿತು. ಈ ಅವಧಿಯಲ್ಲಿ ಗುಜರಾತ್ ತಂಡದ ಸ್ಟಾರ್‌ ರೇಡ್‌ರಗಳು ಭರ್ಜರಿ ಪ್ರದರ್ಶನ ನೀಡಿ ಮಿಂಚಿದರು.

 Pro Kabaddi 2023: Haryana Steelers Beat Gujarat Giants

ಈ ಅವಧಿಯಲ್ಲಿ ಗುಜರಾತ್ 19-14 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದರೂ ಕೂಡ, ಮೊದಲಾವಧಿಯಲ್ಲಿ ಅಂಕಗಳ ವ್ಯಾತ್ಯಾಸ ಹೆಚ್ಚಿತ್ತು. ಪರಿಣಾಮ ಗುಜರಾತ್ ಪಂದ್ಯವನ್ನು ಕೈ ಚೆಲ್ಲಬೇಕಾಯಿತು. ಈ ಅವಧಿಯಲ್ಲಿ ಹರಿಯಾಣ ತಂಡ ಒಮ್ಮೆ ಆಲೌಟ್ ಆಯಿತು.

ವಿಜೇತ ತಂಡದ ಪರ ರೇಡರ್‌ ವಿನಯ್ 9 ಅಂಕ ಕಲೆ ಹಾಕಿದರೆ, ಪರಾಜಿತ ತಂಡದ ಪರ ರೋಹಿತ್ ಗುಲಿಯಾ 7 ಅಂಕ ಪೇರಿಸಿ ಸೋಲಿನಲ್ಲಿ ಮಿಂಚಿದರು.

Story first published: Wednesday, December 20, 2023, 6:00 [IST]
Other articles published on Dec 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+