Pro Kabaddi 2023: ಹರಿಯಾಣ ಸ್ಟೀಲರ್ಸ್ ಸಂಘಟಿತ ಆಟಕ್ಕೆ ಒಲಿದ ಜಯ
10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ 41ನೇ ಪಮದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಹರಿಯಾಣ ಸ್ಟೀಲರ್ಸ್ 42-29 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಏಕ ಪಕ್ಷೀಯ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಸ್ಟೀಲರ್ಸ್ ಆಡಿದ 7 ಪಂದ್ಯಗಳಲ್ಲಿ 5 ಜಯ ದಾಖಲಿಸಿದ್ದು, 26 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತಮಿಳು ತಲೈವಾಸ್ ತಂಡದ ಮೂರನೇ ಗೆಲುವಿನ ಆಸೆ ಕಮರಿದೆ.

ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹರಿಯಾಣ ಅಂಕದ ಬೇಟೆಯಲ್ಲಿ 6 ಅಂಕ ಮುನ್ನಡೆ ಸಾಧಿಸಿತು. ಹರಿಯಾಣ ಈ ಅವಧಿಯಲ್ಲಿ 18-12 ಅಂಕಗಳನ್ನು ಬಾಚಿಕೊಂಡಿತು. ದಾಳಿಯಲ್ಲಿ ಹರಿಯಾಣ 8, ಟ್ಯಾಕಲ್‌ನಲ್ಲಿ 7 ಅಂಕ ಕಲೆ ಹಾಕಿ ಅಬ್ಬರಿಸಿದ ಸ್ಟೀಲರ್ಸ್, ಒಮ್ಮೆ ಆಲೌಟ್ ಅಂಕವನ್ನು ಕಲೆ ಹಾಕಿತು. ಈ ಅವಧಿಯಲ್ಲಿ ತಲೈವಾಸ್ ತಂಡದ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು.
ಎರಡನೇ ಅವಧಿಯಲ್ಲಿ ತಲೈವಾಸ್ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿ, ಸ್ಟೀಲರ್ಸ್‌ಗೆ ಶಾಕ್ ನೀಡುವ ಕನಸನ್ನು ಹೊಂದಿತ್ತು. ಈ ಆಸೆಗೆ ಹರಿಯಾಣ ಸೊಪ್ಪು ಹಾಕಲಿಲ್ಲ. ಈ ಅವಧಿಯಲ್ಲಿ ತಲೈವಾಸ್ ಅಂಕವನ್ನು ಬಾಚಿಕೊಳ್ಳುವ ನೆಪದಲ್ಲಿ ಅಂಕಗಳನ್ನು ನೀಡಿ, ಅಂಕಗಳನ್ನು ಪಡೆಯಿತು. ಈ ಅವಧಿಯಲ್ಲಿ ಹರಿಯಾಣ 24-17 ಅಂಕಗಳೊಂದಿಗೆ ಮುನ್ನಡೆ ಸಾಧಿಸಿ ಗೆಲುವು ತನ್ನದಾಗಿಸಿಕೊಂಡಿತು. ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ತಲೈವಾಸ್ ಯೋಜನೆಯನ್ನು ಬುಡ ಮೇಲು ಮಾಡಿದ ಸ್ಟೀಲರ್ಸ್ ಆರ್ಭಟಿಸಿತು. ತಲೈವಾಸ್ ಗೆಲುವಿನ ಆಸೆ ಮುಂದಿನ ಪಂದ್ಯಕ್ಕೆ ಮುಂದೂಡಿತು.
ದಾಳಿಯಲ್ಲಿ ಉಭಯ ತಂಡಗಳು ಸಮಬಲದ ಆಟ ಪ್ರದರ್ಶಿಸಿದರೂ, ಟ್ಯಾಕಲ್‌ನಲ್ಲಿ ಹರಿಯಾಣ ಉತ್ತಮ ಪ್ರದರ್ಶನ ನೀಡಿತು. ಹರಿಯಾಣ ಪರ ಜೈದೀಪ್, ರಾಹುಲ್ ಅಂಕಗಳನ್ನು ಬಾಚಿಕೊಂಡು ಗಮನ ಸೆಳೆದರು.

ದಬಾಂಗ್ ದೆಹಲಿಗೆ ಜಯ
ಇದಕ್ಕೂ ಮೊದಲು ನಡೆದ 40ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆ.ಸಿ ತಂಡ 38-29 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ದಬಾಂಗ್ ತಂಡ ಆಡಿದ ಆರು ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದೆ.
ಗುಜರಾತ್ ಈ ಪದ್ಯದಲ್ಲಿ ಸೋತರೂ 23 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ರೊ ಕಬಡ್ಡಿ ಟೂರ್ನಿಯಲ್ಲಿ ದಬಾಂಗ್ ದೆಹಲಿ ತಂಡದ ನವೀನ್ 1000 ಅಂಕಗಳನ್ನು ದಾಟಿದ ಸಾಧನೆಯನ್ನು ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications