Pro Kabaddi 2023: ತಮಿಳು ತಲೈವಾಸ್ ವಿರುದ್ಧ ಪ್ಯಾಂಥರ್ಸ್‌ಗೆ ರೋಚಕ ಜಯ
ಸಂಘಟಿತ ಆಟವನ್ನು ಪ್ರದರ್ಶಿಸಿದ ಜೈಪೂರ್ ಪಿಂಕ್ ಪ್ಯಾಂಥರ್ಸ್ ತಂಡ, 10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 36ನೇ ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ ರೋಚಕ ಜಯ ದಾಖಲಿಸಿದೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಜೈಪೂರ್ 25-24 ರಿಂದ ತಮಿಳು ತಲೈವಾಸ್ ವಿರುದ್ಧ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಜೈಪೂರ್ ಆಡಿದ ಎಳು ಪಂದ್ಯಗಳಲ್ಲಿ 4 ಗೆಲುವು, 2 ಸೋಲು ಕಂಡಿರುವ ಪ್ಯಾಂಥರ್ಸ್ 25 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ತಮಿಳು ತಲೈವಾಸ್ ತಂಡದ ಮೂರನೇ ಗೆಲುವಿನ ಆಸೆ ಕಮರಿದೆ.

ಆರಂಭದ 20 ನಿಮಿಷದಲ್ಲಿ ತಮಿಳು ತಲೈವಾಸ್ ತಂಡ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ತಲೈವಾಸ್ 16-10 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ತಮಿಳು ತಲೈವಾಸ್ ರೈಡ್‌ನಲ್ಲಿ 8, ಟ್ಯಾಕಲ್‌ನಲ್ಲಿ 5 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಜೈಪೂರ್ ದಾಳಿಯಲ್ಲಿ 6, ರಕ್ಷಣಾ ವಿಭಾಗದಿಂದ 3 ಅಂಕ ಕಲೆ ಹಾಕಿತು. ತಮಿಳು ತಲೈವಾಸ್ ಒಂದು ಬಾರಿ ಎದುರಾಳಿ ಆಟಗಾರರನ್ನು ಆಲೌಟ್ ಮಾಡಿತು.
ಎರಡನೇ ಅವಧಿಯಲ್ಲಿ ಜೈಪೂರ್ ಅಮೋಘ ಆಟದ ಪ್ರದರ್ಶನ ನೀಡಿತು. ಭರ್ಜರಿ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ಸ್ ರೈಡ್ ಹಾಗೂ ಟ್ಯಾಕಲ್‌ನಲ್ಲಿ ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ತಲೈವಾಸ್ ಆಟ ಮಂಕಾಯಿತು.
ಒಟ್ಟಾರೆ ಪಂದ್ಯದಲ್ಲಿ ಜೈಪೂರ್ 41 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಅಂಕ ಕಲೆ ಹಾಕಿತು. ಇಷ್ಟೇ ಪ್ರಯತ್ನದಲ್ಲಿ ತಮಿಳು 9 ಅಂಕ ಪೇರಿಸಿತು. ಇನ್ನು ಟ್ಯಾಕಲ್‌ನಲ್ಲಿ ಜೈಪೂರ್ 8,ತಲೈವಾಸ್ 9 ಅಂಕ ಪೇರಿಸಿತು.

ಗುಜರಾತ್‌ಗೆ ಪೂರ್ಣ ಅಂಕ
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 38-30 ರಿಂದ ಯು.ಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಗುಜರಾತ್ 7 ಪಂದ್ಯಗಳಲ್ಲಿ 4 ಜಯ ಸಾಧಿಸಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಮೊದಲಾವಧಿಯ ಆಟದಲ್ಲಿ ಗುಜರಾತ್ 14-19 ಅಂಕಗಳಿಂದ ಹಿನ್ನಡೆ ಸಾಧಿಸಿತು. ಯು.ಪಿ ಈ ಅವಧಿಯಲ್ಲಿ ದಾಳಿಯ ಅಮೋಘ ಆಟವನ್ನು ಆಡಿತು. ಅಲ್ಲದೆ 11 ಅಂಕವನ್ನು ಪೇರಿಸಿತು. ಈ ಅವಧಿಯಲ್ಲಿ ಗುಜರಾತ್ 10 ಅಂಕಗಳನ್ನು ಕಲೆ ಹಾಕಿತು.
ಎರಡನೇ ಅವಧಿಯ ಆಟದಲ್ಲಿ ಗುಜರಾತ್ ಭರ್ಜರಿಯಾಗಿ ಪುಟಿದೆದ್ದಿತು. ಈ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಗುಜರಾತ್ ಅಬ್ಬರಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಹೆಚ್ಚಿನ ಅಂಕಗಳನ್ನು ಬಾಚಿಕೊಂಡ ಗುಜರಾತ್ ಅಬ್ಬರಿಸಿತು. ಅಲ್ಲದೆ ಈ ಅವಧಿಯಲ್ಲಿ ಎರಡು ಬಾರಿ ಯುಪಿ ತಂಡವನ್ನು ಆಲೌಟ್ ಮಾಡಿತು.
ಗುಜರಾತ್ ಪರ ರಾಕೇಶ್ 14 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಯುಪಿ ಪರ ಸುರೇಂದ್ರ ಗಿಲ್ 13 ಅಂಕ ಬಾಚಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications