Pro Kabaddi 2023: ಬೆಂಗಾಲ್, ಜೈಪುರ್ ಪಂದ್ಯ ಡ್ರಾ, ಪಾಟ್ನಾಗೆ ರೋಚಕ ಜಯ
ಪ್ರೊ ಕಬಡ್ಡಿ ಲೀಗ್‌ನ 10 ನೇ ಆವೃತ್ತಿಯ ಮೊದಲ ಟೈ ಪಂದ್ಯಕ್ಕೆ ಗುರುವಾರ ವೇದಿಕೆ ಆಯಿತು. ಬೆಂಗಾಲ್ ವಾರಿಯರ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಟೈ ಆದರೆ, ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಗುಜರಾತ್ ಜೈಂಟ್ಸ್ ಮೊದಲ ಸೋಲು ಕಂಡಿತು. 11ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 33-30 ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಪಾಟ್ನಾ ಆಡಿದ ಎರಡೂ ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಗುಜರಾತ್ ಈ ಪಂದ್ಯದಲ್ಲಿ ಸೋಲು ಕಂಡರೂ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಈ ಋತುವಿನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡವು ಪಾಟ್ನಾ ಪೈರೇಟ್ಸ್ ವಿರುದ್ಧ ಸೋಲು ಅನುಭವಿಸಬೇಕಾಯಿತು. ಈ ಪಂದ್ಯದಲ್ಲಿ ಪಾಟ್ನಾ ಆರಂಭದಿಂದಲೂ ಪ್ರಾಬಲ್ಯವನ್ನು ಕಾಯ್ದುಕೊಂಡಿತ್ತು. ಮೊದಲಾವಧಿಯಲ್ಲಿ ಪಾಟ್ನಾ ಬೃಹತ್ ಮುನ್ನಡೆ ಸಾಧಿಸಿದ್ದರು. ದ್ವಿತೀಯಾರ್ಧದಲ್ಲಿ ಗುಜರಾತ್, ಪಾಟ್ನಾ ರಣ ತಂತ್ರವನ್ನು ಬೇಧಿಸಿ ಅಂಕಗಳನ್ನು ಗಳಿಸಿತು.
ಒಟ್ಟಾರೆ ಪಂದ್ಯದಲ್ಲಿ ಪಾಟ್ನಾ 41 ಬಾರಿ ಎದುರಾಳಿ ಅಂಗಳವನ್ನು ಪ್ರವೇಶಿಸಿ 13 ಅಂಕಗಳನ್ನು ಕಲೆ ಹಾಕಿತು. ಇಷ್ಟೇ ಪ್ರಯತ್ನದಲ್ಲಿ ಗುಜರಾತ್ 15 ಅಂಕ ಬಾಚಿಕೊಂಡಿತು. ಪಾಟ್ನಾ 24 ಬಾರಿ ಟ್ಯಾಕಲ್ ಪ್ರಯತ್ನ ಪಟ್ಟು 11ರಲ್ಲಿ ಯಶಸ್ಸು ಸಾಧಿಸಿತು. ಜೈಂಟ್ಸ್ 9 ಟ್ಯಾಕಲ್ ಪಾಯಿಂಟ್ಸ್ ಗಳಿಸಿತು.

ವಿಜೇತ ತಂಡದ ಪರ ಸುಧಾಕರ್, ಸಚಿನ್, ನೀರಜ್ ಗೆಲುವಿನಲ್ಲಿ ಮಿಂಚಿದರು. ಗುಜರಾತ್ ಪರ ರಾಕೇಶ್ 11 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಬೆಂಗಾಲ್, ಪ್ಯಾಂಥರ್ಸ್ ಸಮಬಲದ ಹೋರಾಟ
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 28-28 ರಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಟೈ ಸಾಧಿಸಿತು. ಈ ಮೂಲಕ ಬೆಂಗಾಲ್ ವಾರಿಯರ್ಸ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹಾಗೂ ಜೈಂಪುರ್ ಪಿಂಕ್ ಪ್ಯಾಂಥರ್ಸ್ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಗಳಿಸಿದೆ.
ಜೈಪುರ್ ಮೊದಲಾವಧಿಯಲ್ಲಿ 13-09 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ ಬೆಂಗಾಲ್ ಎರಡನೇ ಅವಧಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕಗಳನ್ನು ಗುಡ್ಡೆ ಹಾಕಿತು. ಅಲ್ಲದೆ ಬೆಂಗಾಲ್ ಗೆಲುವಿನ ಆಸೆಗೆ ಬ್ರೇಕ್ ಹಾಕಿತು. ಈ ಅವಧಿಯಲ್ಲಿ ಬೆಂಗಾಲ್ 19 ಅಂಕ ಪಡೆದರೆ, ಜೈಪುರ್ 15 ಅಂಕ ಕಲೆ ಹಾಕಿತು. ಉಭಯ ತಂಡಗಳು ರೇಡ್ ಹಾಗೂ ಟ್ಯಾಕಲ್ ನಲ್ಲಿ ಸಮಬಲದ ಪ್ರದರ್ಶನ ನೀಡಿದವು.
ಜೈಪುರ್ ತಂಡದ ಪರ ಅರ್ಜುನ್ ಹಾಗೂ ಬೆಂಗಾಲ್ ತಂಡದ ಪರ ಶ್ರೀಕಾಂತ್ ಜಾದವ್ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications