For Quick Alerts
ALLOW NOTIFICATIONS  
For Daily Alerts

Pro Kabaddi: ಜೈಪುರ್‌ ಮಣಿಸಿದ ಪಾಟ್ನಾ ನಾಲ್ಕನೇ ಸ್ಥಾನಕ್ಕೆ ಬಡ್ತಿ

ಸ್ಟಾರ್ ಆಟಗಾರ ಸಚಿನ್ ಅವರ ಮನಮೋಹಕ ಆಟದ ನೆರವಿನಿಂದ ಪಾಟ್ನಾ ಪೈರೇಟ್ಸ್‌ 36-33 ಅಂಕಗಳಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಮಣಿಸಿತು.

ದೆಹಲಿಯ ತ್ಯಾಗರಾಜ್ ಇಂದೋರ್ ಸ್ಟೇಡಿಯಂನಲ್ಲಿ ನಡೆದ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಾಟ್ನಾ ಅಮೋಘ ಆಟದ ಪ್ರದರ್ಶನ ನೀಡಿ ಪೂರ್ಣ ಅಂಕ ಕಲೆ ಹಾಕಿದ್ದಲ್ಲದೆ, ಮುಂದಿನ ಹಂತಕ್ಕೆ ಪ್ರವೇಶಿಸುವ ಕನಸನ್ನು ಹತ್ತಿರವಾಗಿದೆ. ಈ ಗೆಲುವಿನೊಂದಿಗೆ ಪಾಟ್ನಾ ಆಡಿದ 19 ಪಂದ್ಯಗಳಲ್ಲಿ 9 ಜಯ, 7 ಸೋಲು, 3 ಡ್ರಾ ಸಾಧಿಸಿದ್ದು, 58 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಸೋಲಿನ ಹೊರತಾಗಿಯೂ ಜೈಪುರ್ ಪಿಂಕ್ ಪ್ಯಾಂಥರ್ಸ್‌ ಆಡಿದ 18 ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿದ್ದು 72 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Pro Kabaddi 2023: Patna Pirates Beat Jaipur Pink Panthers

ಮೊದಲ 20 ನಿಮಿಷದ ಪಂದ್ಯದಲ್ಲಿ ಜೈಪುರ್ ಅಬ್ಬರದ ಆಟವನ್ನು ಪ್ರದರ್ಶಿಸಿತು. ಸುಲಭವಾಗಿ ಅಂಕಗಳನ್ನು ಕಲೆ ಹಾಕಿ, ಪ್ಯಾಂಥರ್ಸ್‌ ತಂಡಕ್ಕೆ ಪೆಟ್ಟು ನೀಡುವ ಪಾಟ್ನಾ ಆಸೆಗೆ ಆರಂಭದಲ್ಲಿ ಪೆಟ್ಟು ಬಿದ್ದಿತು. ಈ ಅವಧಿಯಲ್ಲಿ ಉಭಯ ತಂಡಗಳು ದಾಳಿಯಲ್ಲಿ ಸಮಬಲದ ಪ್ರದರ್ಶನ ನೀಡಿದವು. ಟ್ಯಾಕಲ್‌ನಲ್ಲಿ ಜೈಪುರ್ ತಂಡದ ಕೈ ಕೊಂಚ ಮೇಲಾಯಿತು. ಅಲ್ಲದೆ ಮೊದಲ 20 ನಿಮಿಷದಲ್ಲಿ ಜೈಪುರ್‌ ಎದುರಾಳಿ ಅಂಗಳವನ್ನು ಒಮ್ಮೆ ಖಾಲಿ ಮಾಡಿ ಬೋನ್ಸ್‌ ಅಂಕವನ್ನು ಕಲೆ ಹಾಕಿತು. ಪರಿಣಾಮ ಮೊದಲಾವಧಿ ಸಂಪೂರ್ಣವಾಗಿ ಜೈಪುರ್ ಪರ ವಾಲಿತು.

ಎರಡನೇ ಅವಧಿಯ ಆಟದಲ್ಲಿ ಜೈಪುರ್ ತಂಡದ ಪ್ಲ್ಯಾನ್‌ ಅರಿತು ಆಡಿದ ಪಾಟ್ನಾ ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ, ನಂತರ ಅಬ್ಬರಿಸಿತು. ಈ ಅವಧಿಯಲ್ಲಿ ಪಾಟ್ನಾ ದಾಳಿಯಲ್ಲಿ 11 ಹಾಗೂ ಜೈಪುರ್‌ 10 ಅಂಕವನ್ನು ಕಲೆ ಹಾಕಿತು. ಅಲ್ಲದೆ ಮೊದಲಾವಧಿಯಲ್ಲಿ ಕಂಡಿದ್ದ ಅಂಕಗಳ ಹಿನ್ನಡೆಯನ್ನು ಸರಿದೂಗಿಸಲು ಅಬ್ಬರದ ಪ್ರದರ್ಶನ ನೆರವಾಯಿತು. ಈ ಅವಧಿಯಲ್ಲಿ ಪಾಟ್ನಾ ಎರಡು ಬಾರಿ ಜೈಪುರ್‌ ತಂಡವನ್ನು ಆಲೌಟ್ ಮಾಡಿ ಬೋನ್ಸ್‌ ಅಂಕವನ್ನು ಕಲೆ ಹಾಕಿತು. ಪಾಟ್ನಾ 22-15 ಅಂಕಗಳೊಂದಿಗೆ ಭಾರೀ ಮುನ್ನಡೆ ಸಾಧಿಸಿ ಜಯ ಸಾಧಿಸಿತು.

ಪಾಟ್ನಾ ತಂಡದ ಪರ ಸ್ಟಾರ್ ರೈಡರ್‌ 17 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಅಂಕವನ್ನು ಕಲೆ ಹಾಕಿದರು. ವಿಜೇತ ತಂಡದ ಪರ ಸುಧಾಕರ್ ಸಹ ಸೂಪರ್‌ ಟೆನ್‌ ಸಾಧನೆ ಮಾಡಿದರು. ಪರಾಜಿತ ತಂಡದ ಪರ ಅರ್ಜುನ್ ದೇಶ್ವಾಲ್‌ 12 ಅಂಕ ಕಲೆ ಹಾಕಿತು.

Pro Kabaddi 2023: Patna Pirates Beat Jaipur Pink Panthers

ದೆಹಲಿ, ಪುಣೇರಿ ಪಂದ್ಯ ಟೈ

ಇನ್ನೊಂದು ಪಂದ್ಯದಲ್ಲಿ ದಬಾಂಗ್ ದೆಹಲಿ ಕೆ.ಸಿ ಹಾಗೂ ಪುಣೇರಿ ಪಲ್ಟನ್‌ ತಂಡಗಳು ಅಂಕಗಳನ್ನು ಹಂಚಿಕೊಂಡವು. ಉಭಯ ತಂಡಗಳು ನಿಗದಿತ ಸಮಯದಲ್ಲಿ ತಲಾ 30 ಅಂಕಗಳನ್ನು ಕಲೆ ಹಾಕಿದ್ದರಿಂದ ಪಂದ್ಯ ಟೈ ಆಯಿತು. ಮೊದಲಾವಧಿಯಲ್ಲಿ ದಬಾಂಗ್‌ ತಂಡ 8 ಅಂಕಗಳ ಮುನ್ನಡೆ ಸಾಧಿಸಿದರೂ, ಎರಡನೇ ಅವಧಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿ ಅಂಕವನ್ನು ಹಂಚಿಕೊಂಡಿತು.

ಈ ಪಂದ್ಯದಲ್ಲಿ ಮೂರು ಅಂಕ ಕಲೆ ಹಾಕಿದ ಪುಣೇರಿ ಮುಂದಿನ ಹಂತಕ್ಕೆ ಕ್ವಾಲಿಫೈ ಆಯಿತು. ಆಡಿದ 17 ಪಂದ್ಯಗಳಲ್ಲಿ 12 ಜಯ, 2 ಸೋಲು, 3 ಡ್ರಾ ಸಾಧಿಸಿರುವ ಪುಣೇರಿ 71 ಅಂಕವನ್ನು ಕಲೆ ಹಾಕಿ ಎರಡನೇ ಸ್ಥಾನ ಪಡೆಯಿತು. ಇನ್ನು ದಬಾಂಗ್ 19 ಪಂದ್ಯಗಳಲ್ಲಿ 11 ಜಯ, 5 ಸೋಲು, 3 ಡ್ರಾ ಸಾಧಿಸಿರುವ ಪುಣೇರಿ 68 ಅಂಕವನ್ನು ಕಲೆ ಹಾಕಿ ಮೂರನೇ ಸ್ಥಾನ ಪಡೆಯಿತು.

Story first published: Tuesday, February 6, 2024, 8:19 [IST]
Other articles published on Feb 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+