Pro Kabaddi 2023: ಪಟ್ನಾ ಪೈರೇಟ್ಸ್ ಜಯ, ಪುಣೇರಿ ಪಲ್ಟನ್‌ಗೆ ಅಗ್ರ ಸ್ಥಾನ
ಸೋಮವಾರ ನೋಯ್ಡಾ ಅಂಗಳದಲ್ಲಿ ನಡೆದ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 52ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ 48-41 ರಿಂದ ಯು.ಪಿ ಯೋಧಾಸ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಪಾಟ್ನಾ ಪೈರೇಟ್ಸ್ ಆಡಿದ 9 ಪಂದ್ಯಗಳಲ್ಲಿ 5 ಜಯ, 4 ಸೋಲು, ಕಂಡಿದ್ದು 27 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಯು.ಪಿ ಯೋಧಾಸ್ 10 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 21 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಮೊದಲಾವಧಿಯಿಂದಲೂ ಪಾಟ್ನಾ ಪೈರೇಟ್ಸ್ ಯುಪಿ ಯೋಧಾಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಸಫಲವಾಯಿತು. ಈ 20 ನಿಮಿಷದಲ್ಲಿ ಪಾಟ್ನಾ 25-16 ಅಂಕಗಳ ಭಾರೀ ಮುನ್ನಡೆ ಕಾಯ್ದುಕೊಂಡಿತು. ದಾಳಿಯಲ್ಲೇ ಪಾಟ್ನಾ ಹೆಚ್ಚಿನ ಅಂಕಗಳನ್ನು ಬಾಚಿಕೊಂಡಿತು. ಈ ವೇಳೆ ಯು.ಪಿ ತಂಡ ಎರಡು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯಲ್ಲಿ ಯು.ಪಿ ಪುಟಿದೇಳುವ ಸೂಚನೆಯನ್ನು ನೀಡಿತು. ಅಭಿಮಾನಿಗಳು ಈ ಪಂದ್ಯವನ್ನು ಭಾರೀ ಕುತೂಹಲದಿಂದ ವೀಕ್ಷಿಸಿದರು. ಆದರೆ ಮೊದಲಾವಧಿಯಲ್ಲಿ ಪಾಟ್ನಾ ಸಾಧಿಸಿದ್ದ ಅಂಕಗಳ ಮುನ್ನಡೆಯನ್ನು ಮೀರಿ ಅಂಕಗಳನ್ನು ಕಲೆ ಹಾಕುವಲ್ಲಿ ಯು.ಪಿ ವಿಫಲವಾಯಿತು. ನಿಶ್ಚಿತವಾಗಿಯೂ ಯು.ಪಿ 25-23 ಅಂಕಗಳಿಂದ ಎರಡನೇ ಅವಧಿಯಲ್ಲಿ ಮುನ್ನಡೆ ಸಾಧಿಸಿದರೂ, ಜಯ ಪಾಟ್ನಾ ಪರ ವಾಲಿತು.

ದಾಳಿಯಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಟ್ಯಾಕಲ್ ನಲ್ಲಿ ಪಾಟ್ನಾ ತಂಡದ ಕೈ ಮೇಲಾಯಿತು. ಪಾಟ್ನಾ ಪರ ಸಚಿನ್ 15, ಮಂಜೀತ್ 9 ಅಂಕ ಪೇರಿಸಿದರು. ಯು.ಪಿ ಯೋಧಾಸ್ ಪರ ಪ್ರದೀಪ್ ನರ್ವಾಲ್ 21 ಅಂಕ ಬಾಚಿಕೊಂಡು ಸೋಲಿನಲ್ಲೂ ಅಬ್ಬರಿಸಿದರು.
ಗುಜರಾತ್ ಜಯ ಭೇರಿ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ 54-18 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಈ ಭರ್ಜರಿ ಜಯದೊಂದಿಗೆ ಪುಣೇರಿ ಪೂರ್ಣ ಅಂಕವನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ತೆಲುಗು ತನ್ನ ಎರಡನೇ ಗೆಲುವಿನ ಹುಡುಕಾಟ ಮುಂದುವರೆಸಿದೆ.
ಪುಣೇರಿ ತಂಡದ ಪರ ಸಂಘಟಿತ ಆಟ ಮೂಡಿ ಬಂದಿತು. ಆದರೆ ಸ್ಟಾರ್ ರೈಡರ್ ಮೋಹಿತ್ 14 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 13 ಅಂಕ ಪೇರಿಸಿದರು. ಉಳಿದಂತೆ ಅಸ್ಲಂ ಸಹ ಗೆಲುವಿನಲ್ಲಿ ಮಿಂಚಿದರು. ತೆಲುಗು ಟೈಟನ್ಸ್ ಪರ ಡಿಫೆಂಡರ್ ಸಂದೀಪ್ 5 ಅಂಕ ಕಲೆ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications