For Quick Alerts
ALLOW NOTIFICATIONS  
For Daily Alerts

Pro Kabaddi 2023: ಪುಣೇರಿ ಎದುರು ಪಲ್ಟಿ ಹೊಡೆದ ಬುಲ್ಸ್‌

ತವರಿನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಪುಣೇರಿ ಪಲ್ಟನ್‌ 43-18ರಿಂದ ಬೆಂಗಳೂರು ಬುಲ್ಸ್‌ ತಂಡವನ್ನು ಮಣಿಸಿತು.

ಬುಧವಾರ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 33ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಪುಣೇರಿ ಆಡಿದ 6 ಪಂದ್ಯಗಳಲ್ಲಿ 5 ಜಯ ಸಾಧಿಸಿತು. ಅಲ್ಲದೆ ಮೊದಲ ಸ್ಥಾನವನ್ನು ಭಧ್ರ ಪಡಿಸಿಕೊಂಡಿದೆ. ಬೆಂಗಳೂರು ಬುಲ್ಸ್‌ ಈ ಪಂದ್ಯದಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ.

Pro Kabaddi 2023: Puneri Paltan Beat Bengaluru Bulls

ಪಂದ್ಯದ ಮೊದಲಾವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಂಕಗಳ ಬೇಟೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿತು. ಮೊದಲ 20 ನಿಮಿಷದಲ್ಲಿ ಪುಣೇರಿ 28-08 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪಲ್ಟನ್‌ ದಾಳಿಯಲ್ಲಿ 12, ಟ್ಯಾಕಲ್‌ನಲ್ಲಿ 10 ಅಂಕವನ್ನು ಕಲೆ ಹಾಕಿತು. ಅಲ್ಲದೆ ಬುಲ್ಸ್‌ ತಂಡವನ್ನು ಎರಡು ಬಾರಿ ಆಲೌಟ್ ಮಾಡಿತು.

ಎರಡನೇ ಅವಧಿಯ ಆಟದಲ್ಲಿ ಪುಣೇರಿ 15-10ರಿಂದ ಬುಲ್ಸ್‌ ವಿರುದ್ಧ ಮುನ್ನಡೆ ಸಾಧಿಸಿ, ಜಯ ಸಾಧಿಸಿತು. ಈ ವೇಳೆಯೂ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಕೊನೆಯ 20 ನಿಮಿಷದಲ್ಲಿ ಬೆಂಗಳೂರು ತಂಡ ಮತ್ತೊಮ್ಮೆ ಆಲೌಟ್ ಆಯಿತು.

Pro Kabaddi 2023: Puneri Paltan Beat Bengaluru Bulls

ಒಟ್ಟಾರೆ ಪಂದ್ಯದಲ್ಲಿ ಬೆಂಗಳೂರು ತಂಡದ ರೇಡರ್‌ಗಳು ಮಂಕಾದರು. ಬುಲ್ಸ್‌ 42 ಬಾರಿ ರೇಡ್‌ ಮಾಡಿ 7 ಅಂಕಗಳನ್ನು ಬಾಚಿಕೊಂಡಿತು. ಇಷ್ಟೇ ವೇಳೆ ಪುಣೇರಿ ದಾಳಿ ನಡೆಸಿ 19 ಅಂಕ ಸೇರಿಸಿತು. ಟ್ಯಾಕಲ್‌ನಲ್ಲಿ ಬುಲ್ಸ್‌ 8, ಪುಣೇರಿ 17 ಅಂಕಗಳನ್ನು ಸೇರಿಸಿತು.

ಪುಣೇರಿ ತಂಡದ ಪರ ಮೊಹಮ್ಮದ್ರೇಜಾ 7, ಮೋಹಿತ್‌ 8 ಅಂಕ ಕಲೆ ಹಾಕಿದರು. ಬುಲ್ಸ್ ತಂಡದ ಪರ ರೋಹಿತ್ ಕುಮಾರ್‌ 6 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

Pro Kabaddi 2023: Puneri Paltan Beat Bengaluru Bulls

ಜೈಪೂರ್‌ಗೆ ಜಯ

ಇದಕ್ಕೂ ಮೊದಲು ನಡೆದ ಮೊದಲ ಪಂದ್ಯದಲ್ಲಿ ಜೈಪೂರ್‌ ಪಿಂಕ್‌ ಪ್ಯಾಂಥರ್ಸ್ 41-24 ರಿಂದ ಯು.ಪಿ ಯೋಧಾಸ್ ತಂಡವನ್ನು ಮಣಿಸಿತು. ಜೈಪೂರ್‌ ಟೂರ್ನಿಯಲ್ಲಿ ಮೂರನೇ ಜಯ ಸಾಧಿಸಿ 20 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಯುಪಿ ಯೋಧಾಸ್‌ ಈ ಸೋಲಿನ ಹೊರತಾಗಿಯೂ ಅಂಕ ಪಟ್ಟಿಯಲ್ಲಿ ಎಳನೇ ಸ್ಥಾನವನ್ನು ಪಡೆದಿದೆ.

ಮೊದಲಾವಧಿಯಲ್ಲಿ ಜೈಪೂರ್‌ ಪಿಂಕ್‌ ಪ್ಯಾಂಥರ್ಸ್‌ ಭರ್ಜರಿ ಅಂಕಗಳನ್ನು ಬೇಟೆ ನಡೆಸಿ ಅಬ್ಬರಿಸಿತು. ಈ ಅವಧಿಯಲ್ಲಿ ಯು.ಪಿ ತಂಡ ಎರಡು ಬಾರಿ ಆಲೌಟ್ ಆಯಿತು. ಪರಿಣಾಮ ಅಂಕಗಳಲ್ಲಿ ಭಾರೀ ಅಂತರ ಕಾಯ್ದುಕೊಂಡ ಜೈಪೂರ್‌ ತಂಡ ಗೆಲುವು ಸಾಧಿಸಿತು.

Story first published: Thursday, December 21, 2023, 6:00 [IST]
Other articles published on Dec 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+