For Quick Alerts
ALLOW NOTIFICATIONS  
For Daily Alerts

Pro Kabaddi 2023: ದಬಾಂಗ್ ದೆಹಲಿ ಮಣಿಸಿದ ಪುಣೇರಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ

10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಪುಣೇರಿ ಪಲ್ಟನ್‌, ಸೋಮವಾರ ನಡೆದ ಪಂದ್ಯದಲ್ಲಿ 30-23 ರಿಂದ ದಬಾಂಗ್ ದೆಹಲಿ ತಂಡವನ್ನು ಮಣಿಸಿತು.

ಆರಂಭದಿಂದಲೂ ಪಂದ್ಯದಲ ಮೇಲೆ ಹಿಡಿತವನ್ನು ಸಾಧಿಸಿದ್ದ ಪುಣೇರಿ ಅಂಕಗಳ ಬೇಟೆಯಲ್ಲು ಮುನ್ನಡೆ ಕಾಯ್ದುಕೊಂಡಿತು. ಪರಿಣಾಮ ಪೂರ್ಣ ಅಂಕವನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು. ಆಡಿರುವ 5 ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿರುವ ಪುಣೇರಿ ಒಟ್ಟು 21 ಅಂಕ ಕಲೆ ಹಾಕಿದೆ. ದಬಾಂಗ್ ದೆಹಲಿ ತಂಡ ಟೂರ್ನಿಯಲ್ಲಿ ಮೂರನೇ ಸೋಲಿಗೆ ಶರಣಾಯಿತು.

Pro Kabaddi 2023: Puneri Paltan Beat Dabang Delhi K.C

ಪುಣೇರಿ ಮೊದಲಾವಧಿಯ 20 ನಿಮಿಷದಲ್ಲಿ ಅಬ್ಬರದ ಆಟವನ್ನು ಆಡಿತು. ಈ ಅವಧಿಯಲ್ಲಿ ಪುಣೇರಿ 18-12 ಅಂಕಗಳ ಮುನ್ನಡೆ ಸಾಧಿಸಿತು. ಹೆಚ್ಚಿನ ಅಂಕಗಳನ್ನು ದಾಳಿಯಲ್ಲಿ ಗಳಿಸಿ ಪುಣೇರಿ ಆರ್ಭಟಿಸಿತು. ದಬಾಂಗ್ ದೆಹಲಿ ದಾಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರು, ರಕ್ಷಣಾ ವಿಭಾಗದ ಆಟ ಕೈ ಕೊಟ್ಟಿತು. ಪರಿಣಾಮ ಈ ಅವಧಿಯಲ್ಲಿ ಒಮ್ಮೆ ದೆಹಲಿ ತಂಡ ಅಂಗಳವನ್ನು ಖಾಲಿ ಮಾಡಿತು.

ಎರಡನೇ ಅವಧಿಯ ಆಟದಲ್ಲಿ ಪುಟಿದೇಳುವ ಸೂಚನೆಯನ್ನು ದೆಹಲಿ ತಂಡ ನೀಡಿತು. ಆದರೆ ಮೊದಲಾವಧಿಯಲ್ಲಿ ಪುಣೇರಿ ಪಲ್ಟನ್ ಪಡೆದಿದ್ದ ಅಂಕ ಪಂದ್ಯದಲ್ಲಿ ವ್ಯತ್ಯಾಸ ಮೂಡಿಸಿತು. ಕೊನೆಯ 20 ನಿಮಿಷದ ಆಟದಲ್ಲಿ ದೆಹಲಿ ದಾಳಿಯಲ್ಲಿ 6, ಟ್ಯಾಕಲ್‌ನಲ್ಲಿ 3 ಅಂಕ ಪೇರಿಸಿತು. ಪುಣೇರಿ ಈ ಅವಧಿಯಲ್ಲಿ ದಾಳಿಯಲ್ಲಿ 5, ಟ್ಯಾಕಲ್‌ನಲ್ಲಿ 7 ಅಂಕ ಬಾಚಿಕೊಂಡಿತು.

ಪುಣೇರಿ ತಂಡದ ಪರ ನಾಯಕ ಅಸ್ಲಂ ಮುಸ್ತಫ್‌ 8, ಮೋಹಿತ್ 7 ಅಂಕಗಳನ್ನು ಕಲೆ ಹಾಕಿದರು. ರಕ್ಷಣಾ ವಿಭಾಗದಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು.

Pro Kabaddi 2023: Puneri Paltan Beat Dabang Delhi K.C

ಅಂಕ ಹಂಚಿಕೊಂಡ ಯು.ಪಿ, ಬೆಂಗಾಲ್

ಯು.ಪಿ ಯೋಧಾಸ್ ಹಾಗೂ ಬೆಂಗಾಲ್ ವಾರಿಯರ್ಸ್‌ ನಡುವೆ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ಈ ಪಂದ್ಯದಲ್ಲಿ ಅಂಕ ಹಂಚಿಕೊಂಡ ಬೆಂಗಾಲ್ ವಾರಿಯರ್ಸ್‌ ಒಟ್ಟು 21 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಇನ್ನು ಯು.ಪಿ ಯೋಧಾಸ್ 15 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿದೆ.

ಮೊದಲಾವಧಿಯ ಆಟದಲ್ಲಿ ಯು.ಪಿ ಮನಮೋಹಕ ಆಟದ ಪ್ರದರ್ಶನ ನೀಡಿತು. ಅಲ್ಲದೆ ಅಂಕದ ಬೇಟೆಯಲ್ಲಿ 4 ಅಂಕಗಳ ವ್ಯತ್ಯಾಸ ಕಾಯ್ದುಕೊಂಡಿತು. ಆದರೆ ಎರಡನೇ ಅವಧಿಯ ಆಟದಲ್ಲಿ ಬೆಂಗಾಲ್ ಯೋಜಾನ ಬದ್ಧ ಆಟವನ್ನು ಆಡಿತು. ಪರಿಣಾಮ ಈ ಅವಧಿಯಲ್ಲಿ 23-19 ಅಂಕಗಳಿಂದ ಮುನ್ನಡೆ ಸಾಧಿಸಿತು. ನಿಗದಿತ ಸಮಯದ ಕೊನೆಗೆ ಉಭಯ ತಂಡಗಳು ತಲಾ 37 ಅಂಕಗಳನ್ನು ಹೊಂದಿದ್ದರಿಂದ ಪಂದ್ಯ ಟೈನಲ್ಲಿ ಕೊನೆಯಾಯಿತು.

ಬೆಂಗಾಲ್‌ ಪರ ಮನಿಂದರ್ 9 ಅಂಕ ಕಲೆ ಹಾಕಿದರೆ, ಯು.ಪಿ ಪರ ಸುರೇಂದ್ರ ಗಿಲ್ 18 ಅಂಕ ಬಾಚಿಕೊಂಡರು.

Story first published: Tuesday, December 19, 2023, 6:10 [IST]
Other articles published on Dec 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+