Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi 2023: ಸೋನು ಮ್ಯಾಜಿಕ್: ಗುಜರಾತ್‌ಗೆ ಜಯದ ಹ್ಯಾಟ್ರಿಕ್

ಭರ್ಜರಿ ಆಟದ ಪ್ರದರ್ಶನ ನೀಡಿದ ಸೋನು ಜಗ್ಲಾನ್ ಗುಜರಾತ್ ಜೈಂಟ್ಸ್ ಹ್ಯಾಟ್ರಿಕ್ ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಕೊನೆಯ ನಿಮಿಷದಲ್ಲಿ ಸೋನು ಸೂಪರ್ ರೈಡ್‌ ಮಾಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಮಂಗಳವಾರ EKA ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ 39-37 ರಿಂದ ಯು-ಮುಂಬಾ ತಂಡವನ್ನು ಮಣಿಸಿತು.

Pro Kabaddi 2023: SONU SHINES in Gujarat Giants hat trick win

ಆರಂಭಿಕ ಕೆಲವು ನಿಮಿಷಗಳಲ್ಲಿ ಯು ಮುಂಬಾ ಉತ್ತಮವಾಗಿ ಆಡಿದತು. ಉಭಯ ತಂಡಗಳು ಪಾಯಿಂಟ್ಸ್ ಗಳಿಸುತ್ತಿದ್ದರೂ, 5ನೇ ನಿಮಿಷದಲ್ಲಿ ಗುಮನ್ ಸಿಂಗ್ ಅವರ ಎರಡು ಪಾಯಿಂಟ್ ರೈಡ್‌ನಿಂದ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯ ಕುತೂಹಲದಿಂದ ಕೂಡಿತ್ತು.

ಯುಮುಂಬಾ ಪರ ಈ ಅವಧಿಯಲ್ಲಿ ಸೂಪರ್ ಟ್ಯಾಕಲ್ ಮಾಡಿದ ಮಹೇಂದ್ರ ಸಿಂಗ್ ಅಬ್ಬರಿಸಿದರು. ಈ ಲೆಕ್ಕಾಚಾರವನ್ನು ನೋಡಿದಾಗ ಮುಂಬಾ ಭರ್ಜರಿ ಅಂಕಗಳ ಮುನ್ನಡೆ ಸಾಧಿಸುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈ ಲೆಕ್ಕಾಚಾರ ಎಲ್ಲ ಕೈ ಕೊಟ್ಟಿತು. ಗುಜರಾತ್ ಉತ್ತಮ ಆಟದ ಪ್ರದರ್ಶನ ನೀಡಿತು. ಅಲ್ಲದೆ ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಶ್ರಮಿಸಿತು.

ಎರಡನೇ ಅವಧಿಯಲ್ಲಿ ಹಾಕಿಕೊಂಡ ಯೋಜನೆಯಂತೆ ಆಡಿದ್ದರಿಂದ ಗುಜರಾತ್, ಮುಂಬೈ ರಣತಂತ್ರವನ್ನು ಮೆಟ್ಟಿ ನಿಂತಿತು. ಅಲ್ಲದೆ ಇದೇ ಅವಧಿಯಲ್ಲಿ ಒಂದು ಬಾರಿ ಆಲೌಟ್ ಮಾಡಿ ಆರ್ಭಟ ನಡೆಸಿತು. ಈ ವೇಳೆ ಜೈಂಟ್ಸ್ 23-19 ಮುನ್ನಡೆ ಸಾಧಿಸಿತು. ಸೋನು ಅವರ ಅದ್ಭುತ ರೈಡಿಂಗ್ ಮತ್ತು ಉತ್ತಮ ಟ್ಯಾಕಲ್ ನಿಂದ ಗುಜರಾತ್ 30 ನಿಮಿಷಗಳ ನಂತರ 30-22 ರಿಂದ ಮುನ್ನಡೆ ಸಾಧಿಸಿದರು.

ಯು ಮುಂಬಾ ಭರ್ಜರಿಯಾಗಿ ಪಂದ್ಯದಲ್ಲಿ ಪುಟಿದೇಳುವ ಸೂಚನೆ ನೀಡಿತು. ಆದರೆ ಸೋನು ತನ್ನ ಮ್ಯಾಜಿಕ್ ತೋರಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಅದ್ಭುತವಾದ ಸೂಪರ್ ರೈಡ್ ಮಾಡಿ ಜೈಂಟ್ಸ್‌ಗೆ ಸತತ ಮೂರನೇ ಜಯವನ್ನು ನೀಡಿದರು.

Story first published: Wednesday, December 6, 2023, 8:27 [IST]
Other articles published on Dec 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+