10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದ್ದ ತೆಲುಗು ಟೈಟನ್ಸ್ ಕೊನೆಗೂ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಶುಕ್ರವಾರ ನಡೆದ ಲೀಗ್‌ನ 36ನೇ ಪಂದ್ಯದಲ್ಲಿ ತೆಲುಗು 37-36ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ತೆಲುಗು ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಸೋಲಿನ ಹೊರತಾಗಿಯೂ ಹರಿಯಣಾ ಸ್ಟೀಲರ್ಸ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಉಭಯ ತಂಡಗಳ ಫೈಟ್ ಆರಂಭದಿಂದಲೂ ರೋಚಕತೆ ಹುಟ್ಟಿಸಿತ್ತು. ಪ್ರತಿಯೋಂದು ಅಂಕಕ್ಕಾಗಿ ಎರಡೂ ತಂಡಗಳು ಜಿದ್ದಿಗೆ ಬಿದ್ದವು. ಇದೇ ಅವಧಿಯಲ್ಲಿ ತಮಿಳು ಹಾಗೂ ಹರಿಯಾಣ ತಂಡಗಳು ಒಮ್ಮೆ ಆಲೌಟ್ ಆದವು. ಹರಿಯಾಣ ದಾಳಿಯಲ್ಲಿ ಹೆಚ್ಚು ಅಂಕ ಕಲೆ ಹಾಕಿದರೆ, ತೆಲುಗು ಟ್ಯಾಕಲ್‌ನಲ್ಲಿ ಕಲೆ ಹಾಕಿತು. ಈ ಅವಧಿಯ ಕೊನೆಯಲ್ಲಿ ತೆಲುಗು 21-20 ರಿಂದ ಮುನ್ನಡೆ ಸಾಧಿಸಿತ್ತು.
ಕೊನೆಯ 20 ನಿಮಿಷದ ಆಟದಲ್ಲಿ ಹರಿಯಾಣ, ತೆಲುಗು ಮನಮೋಹಕ ಆಟದ ಪ್ರದರ್ಶನ ನೀಡಿ, ನೆರೆದ ಅಭಿಮಾನಿಗಳ ಮನಸ್ಸು ಗೆದ್ದವು. ಈ ಪಂದ್ಯದಲ್ಲಿ ಅಮೋಘ ರಕ್ಷಣಾ ಕಾರ್ಯವನ್ನು ಮಾಡಿರುವ ತೆಲುಗು,, ಅಬ್ಬರಿಸಿತು. ಇದೇ ಅವಧಿಯಲ್ಲಿ ಹರಿಯಾಣ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಸಮಬಲದ ಪ್ರದರ್ಶನ ನೀಡಿತು. ಎರಡನೇ ಅವಧಿಯಲ್ಲಿ ಉಭಯ ತಂಡಗಳು ತಲಾ 16 ಅಂಕ ಪೇರಿಸಿದವು.

ತೆಲುಗು ಟೈಟನ್ಸ್ ಪರ ಪವನ್ ಶೇರಾವತ್ ಅಬ್ಬರಿಸಿದರು. ಇವರು 21 ಬಾರಿ ಎದುರಳಿ ಕೋರ್ಟ್‌ಗೆ ಎಂಟ್ರಿ ನೀಡಿ 7 ಟಚ್ ಪಾಯಿಂಟ್, 3 ಬೋನಸ್ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಇನ್ನು ಬಲ ವಿಭಾಗದ ರಕ್ಷಣಾ ಆಟಗಾರ ಅಜಿತ್ ಪವಾರ್ ಟ್ಯಾಕಲ್‌ನಲ್ಲಿ 7 ಅಂಕ ಪೇರಿಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಢ 46-33 ಅಂಕಗಳೊಂದಿಗೆ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಪಾಟ್ನಾ ಪೈರೇಟ್ಸ್ ತಂಡಕ್ಕೆ ಇದು ಟೂರ್ನಿಯಲ್ಲಿ ಮೂರನೇ ಗೆಲುವಾಗಿದೆ. ಈ ಗೆಲುವಿನ ಮೂಲಕ ಪಾಟ್ನಾ 17 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
ವಿಜೇತ ತಂಡದ ಪರ ಸುಧಾಕರ್ ಎಂ 11, ಸಚಿನ್ 7 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಹಿಮಾಂಶು ಸೋಲಿನಲ್ಲೂ ಮಿಂಚಿದರು.