Pro Kabaddi 2023: ಯೋಧಾಸ್‌ಗೆ ರೋಚಕ ಗೆಲುವು, ಬುಲ್ಸ್‌ಗೆ ಆಘಾತ
10ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಲು ಹರಸಹಾಸ ಪಡುತ್ತಿರುವ ಬೆಂಗಳೂರು ಬುಲ್ಸ್ ಮತ್ತೊಂದು ಸೋಲು ಕಂಡಿದೆ.
ನೋಯ್ಡಾದಲ್ಲಿ ನಡೆಯುತ್ತಿರುವ ಚರಣದಲ್ಲಿ ಯು.ಪಿ ಯೋಧಾಸ್ ಭರ್ಜರಿ ಪ್ರದರ್ಶನ ನೀಡಿತು. ಯೋಧಾಸ್ 34-33 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.

ಬೆಂಗಳೂರು ಬುಲ್ಸ್ ತಂಡದ ಪರ ಭರತ್ ರೈಡರ್ 8 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಯೋಧಾಸ್ ಪರ ಪ್ರದೀಪ್ ನರ್ವಾಲ್ 10 ಅಂಕ ಕಲೆ ಹಾಕಿ ಗೆಲುವಿನ ರುವಾರಿ ಆದರು. ಸುರೇಂದ್ರ ಗಿಲ್ 7 ಅಂಕ ಕಲೆ ಹಾಕಿದರು.
ಮೊದಲಾವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಹಂತದಲ್ಲಿ ಎರಡೂ ತಂಡಗಳು ಅಂಕಗಳನ್ನು ಸುಲಭವಾಗಿ ಬಿಟ್ಟು ಕೊಡಲಿಲ್ಲ. ಬುಲ್ಸ್ 13-15 ಅಂಕಗಳಿಂದ ಹಿನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದಾಳಿಯಲ್ಲಿ ಕೊಂಚ ಹಿನ್ನಡೆ ಅನುಭವಿಸಿತು. ಟ್ಯಾಕಲ್‌ನಲ್ಲಿ ಉಭಯ ತಂಡಗಳು ಸ್ಥಿರ ಪ್ರದರ್ಶನ ನೀಡಿದವು.

ಎರಡನೇ ಅವಧಿಯಲ್ಲಿ ಬೆಂಗಳೂರು ಬುಲ್ಸ್ ಅಮೋಘ ಆಟದ ಪ್ರದರ್ಶನ ನೀಡಿತು. ಆದರೆ ಮೊದಲಾವಧಿಯ ಸಾಧಿಸಿದ್ದ ಎರಡು ಅಂಕಗಳ ಅಂತರವನ್ನು ಕಡಿಮೆ ಮಾಡಲು ಆಗಲಿಲ್ಲ. ಈ ಅವಧಿಯಲ್ಲಿ ಬೆಂಗಳೂರು 20-19 ರಿಂದ ಯು.ಪಿ ಯೋಧಾಸ್ ಮುನ್ನಡೆ ಸಾಧಿಸಿತು. ರೇಡ್‌ನಿಂದ ಬುಲ್ಸ್ 13 ಅಂಕಗಳನ್ನು ಕಲೆ ಹಾಕಿತು. ಆದರೆ ಕೊನೆಯಲ್ಲಿ ಕೊಂಚ ಎಡವಿದ್ದರಿಂದ ಪಂದ್ಯ ಕೈ ಚೆಲ್ಲಿತು.
ಒಟ್ಟಾರೆ ಬೆಂಗಳೂರು 45 ಬಾರಿ ದಾಳಿ ನಡೆಸಿ 17 ಅಂಕ ಕಲೆ ಹಾಕಿದರೆ, ಯು.ಪಿ ಯೋಧಾಸ್ 15 ಅಂಕ ಕಲೆ ಹಾಕಿತು. ಬುಲ್ಸ್ 27 ಬಾರಿ ಎದುರಾಳಿ ಆಟಗಾರರನ್ನು ಹಿಡಿಯಲು ಪ್ರಯತ್ನಿಸಿ 11 ಅಂಕ ಕಲೆ ಹಾಕಿತು.
ಯು.ಪಿ ಯೋಧಾಸ್ ಈ ಗೆಲುವಿನೊಂದಿಗೆ 20 ಅಂಕ ಕಲೆ ಹಾಕಿ, ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಸೋಲಿನಿಂದಿಗೆ ಬೆಂಗಳೂರು 10ನೇ ಸ್ಥಾನದಲ್ಲಿದೆ.
ಪಾಟ್ನಾಗೆ ಭರ್ಜರಿ ಜಯ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 46-33 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಪಾಟ್ನಾ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಹರಿಯಾಣ ಈ ಸೋಲಿನಿಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications