Pro Kabaddi: ಗೆಲುವಿನ ಓಟ ಮುಂದುವರೆಸಿದ ತೆಲುಗು ಟೈಟಾನ್ಸ್; ಬೆಂಗಾಲ್ ವಾರಿಯರ್ಸ್‌ಗೆ ಸೋಲು
11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ಗೆಲುವಿನ ಓಟ ಮುಂದುವರೆಸಿದೆ. ಪ್ರೋ ಕಬಡ್ಡಿ 202ರ 67ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ತೆಲುಗು ಟೈಟಾನ್ಸ್ ಭರ್ಜರಿ ಗೆಲುವು ಸಾಧಿಸಿದೆ. ತೆಲುಗು ಟೈಟಾನ್ಸ್ ಎದುರು 31-29 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ಸ್ ಸೋಲು ಕಂಡಿದೆ. ತೆಲುಗು ಟೈಟಾನ್ಸ್ ಆಡಿದ 12 ಪಂದ್ಯಗಳಲ್ಲಿ 8 ಜಯ, 4 ಸೋಲಿನೊಂದಿಗೆ 42 ಅಂಕಗಳನ್ನು ಗಳಿಸಿದ್ದು, ಆಗ್ರಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್ ಆಡಿದ 11 ಪಂದ್ಯಗಳಲ್ಲಿ 3 ಗೆಲುವು, 6 ಸೋಲು ಮತ್ತು 2 ರಲ್ಲಿ ಡ್ರಾ ಸಾಧಿಸುವ ಮೂಲಕ 24 ಅಂಕಗಳನ್ನು ಕಲೆ ಹಾಕಿದ್ದು, 10ನೇ ಸ್ಥಾನದಲ್ಲಿದೆ.
ಗುರುವಾರ ನೋಯ್ಡಾ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಿದ್ದವು. ಆರಂಭದಲ್ಲಿ ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಕಂಡು ಬಂತು. ಆದರೆ ಪ್ರಣಯ್ ರಾಣೆ ಮತ್ತು ಮಂಜೀತ್ ಅವರು ಅಂಕಗಳನ್ನು ಬೇಟೆಯಾಡುವ ಮೂಲಕ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.

ಇತ್ತ ವಿಜಯ್ ಮಲಿಕ್ ನೇತೃತ್ವದ ತೆಲುಗು ಟೈಟಾನ್ಸ್ ತಂಡ ಬೆಂಗಾಲ್ ವಾರಿಯರ್ಸ್‌ಗೆ ಪ್ರತ್ತ್ಯುತರ ನೀಡಿತು. ತೆಲುಗು ಟೈಟಾನ್ಸ್‌ನ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನದ ಪರಿಣಾಮ ಬೆಂಗಾಲ್ ವಾರಿಯರ್ಸ್ ಮೊದಲ ಬಾರಿಗೆ ಆಲೌಟಾಯಿತು. ಇದರೊಂದಿಗೆ ತೆಲುಗು ಟೈಟಾನ್ಸ್ 19-9 ಅಂಕಗಳಿಂದ ಮೊದಲಾರ್ಧದವನ್ನು ಮುಕ್ತಾಯಗೊಳಿಸಿತು.
ಬೆಂಗಾಲ್ ವಾರಿಯರ್ಸ್ ವಿರುದ್ಧ ತೆಲುಗು ಟೈಟಾನ್ಸ್ ಮುನ್ನಡೆ ಕಾಯ್ದುಕೊಂಡಿದ್ದರಿಂದ ದ್ವಿತೀಯಾರ್ಧ ಹೆಚ್ಚು ಕುತೂಹಲಕಾರಿಯಾಗಿರಲಿಲ್ಲ. ಆದರೆ ಬೆಂಗಾಲ್ ರೈಡರ್‌ಗಳಾದ ಪ್ರಣಯ್ ರಾಣೆ ಮತ್ತು ನಿತಿನ್ ಕುಮಾರ್ ಅಂಕಗಳನ್ನು ದೋಚಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಈ ಇಬ್ಬರ ಹೋರಾಟ ಸಾಕಾಲಿಲ್ಲ. ತೆಲುಗು ಟೈಟಾನ್ಸ್ ಪರ ವಿಜಯ್ ಮಲಿಕ್ 14 ಅಂಕಗಳನ್ನು ಕಲೆ ಹಾಕುವ ಮೂಲಕ ತಂಡದ ಗೆಲುವಿಗೆ ಶ್ರಮಿಸಿದರು.
ಬೆಂಗಳೂರಿಗೆ ಸೋಲು
ಗುರುವಾರ ನೋಯ್ಡಾ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತೊಂದು ಸೋಲು ಕಂಡಿದೆ. 11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 68ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ ಗೆಲುವು ಸಾಧಿಸಿದೆ. ಹರಿಯಾಣ ಸ್ಟೀಲರ್ಸ್ ಎದುರು ಬೆಂಗಳೂರು ಬುಲ್ಸ್ 26-32 ಅಂಕಗಳ ಅಂತರದಿಂದ ಸೋತಿದೆ. ಈ ಬಾರಿ ಪ್ರೋ ಕಬಡ್ಡಿ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಿಂದ ಹೇಳಿಕೊಳ್ಳುವಂತ ಪ್ರದರ್ಶನನ ಬರುತ್ತಿಲ್ಲ. ಈಗಾಗಲೇ ಬಹುತೇಕ ಟೂರ್ನಿಯಿಂದ ಹೊರಗುಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications