Pro Kabaddi: ಹರಿಯಾಣ ಸ್ಟೀಲರ್ಸ್ ಬಗ್ಗು ಬಡಿದ ಬೆಂಗಾಲ್ ವಾರಿಯರ್ಸ್
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ 11ರ ಆವೃತ್ತಿಯ 32ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ಬಗ್ಗು ಬಡಿದಿದೆ. ಹರಿಯಾಣ ಸ್ಟೀಲರ್ಸ್ ವಿರುದ್ಧ 40-38 ಅಂಕಗಳ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್ ರೋಚಕ ಗೆಲುವು ಸಾಧಿಸಿದೆ.
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಆದರೆ ಪಟ್ಟು ಬಿಡದ ಹರಿಯಾಣ ಸ್ಟೀಲರ್ಸ್ ತಂಡವು ಬೆಂಗಾಲ್ ವಾರಿಯರ್ಸ್ ಮಣಿಸಿತು. ಮಣಿಂದರ್ ಸಿಂಗ್ ಮತ್ತು ಫಾಜೆಲ್ ಅತ್ರಾಚಲಿ ಅವರು ಹರಿಯಾಣ ಸ್ಟೀಲರ್ಸ್ ಪರ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ಮೊದಲಾರ್ಧದಲ್ಲಿ ಬೆಂಗಾಲ್ ವಾರಿಯರ್ಜ್ ಮತ್ತು ಹರಿಯಾಣ ಸ್ಟೀಲರ್ಸ್ ಎಚ್ಚರಿಕೆಯಿಂದ ಆಟವನ್ನು ಆರಂಭಿಸಿದವು. ಹರಿಯಾಣ ಪರ ಮಣಿಂದರ್ ಸಿಂಗ್ ಅಂಕಗಳ ಬೇಟೆಯಾಡಿದರು. ಆದರೆ ಬೆಂಗಾಲ್ ವಾರಿಯರ್ಸ್ ಕಡೆಯಿಂದಲೂ ಮಿಂಚಿನ ರಕ್ಷಣಾತ್ಮಕ ಆಟ ಕಂಡು ಬಂತು. ಶೀಘ್ರದಲ್ಲೇ ಹರಿಯಾಣ ತನ್ನ ಲಯವನ್ನು ಕಂಡುಕೊಂಡಿತು. ಕೆಲವೇ ನಿಮಿಷಗಳಲ್ಲಿ ಹರಿಯಾಣ 6 ಅಂಕಗಳ ಮುನ್ನಡೆ ಸಾಧಿಸಿತು.
ಮೊದಲಾರ್ಧದ ಮುಗಿಯಲು 4 ನಿಮಿಷಗಳಿರುವಾಗ ಹರಿಯಾಣ ಸ್ಟೀಲರ್ಸ್ ಆಲೌಟ್ ಆಯಿತು. ಇದರೊಂದಿಗೆ
ಬೆಂಗಾಲ್ ವಾರಿಯರ್ಜ್ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಇದಾದ ಬಳಿಕ ವಿರಾಮದ ವೇಳೆಗೆ ಉಭಯ ತಂಡಗಳು 19-19 ಅಂಕಗಳೊಂದಿಗೆ ಸಮಬಲ ಸಾಧಿಸಿದವು.
ದ್ವಿತೀಯಾರ್ಧವನ್ನು ಬೆಂಗಾಲ್ ವಾರಿಯರ್ಜ್ ಅದ್ಭುತವಾಗಿ ಪ್ರಾರಂಭಿಸಿತು. ಇದಕ್ಕೆ ಪ್ರತಿರೋಧ ತೋರಿದ ಹರಿಯಾಣ ಪರ ಮಣಿಂದರ್ ಸಿಂಗ್ ಮತ್ತು ಫಾಜೆಲ್ ಅತ್ರಾಚಲಿ ನಿರ್ಣಾಯಕ ಅಂಕಗಳನ್ನು ಪಡೆದರು. ಈ ವೇಳೆ ಹರಿಯಾಣ 4 ಅಂಕಗಳ ಮುನ್ನಡೆ ಪಡೆಯಿತು. ಜೊತೆಗೆ ಮಣಿಂದರ್ ತನ್ನ ಮೊದಲ ಸೂಪರ್ 10 ಅಂಕಗಳನ್ನು ಪೂರೈಸಿದರು. ಬೆಂಗಾಲ್ ವಾರಿಯರ್ಸ್ ಕಡೆಯಿಂದಲ್ಲೂ ಉತ್ತಮ ಆಟ ಕಂಡು ಬಂತು ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಪುಣೇರಿ ಪಲ್ಟನ್ ಗೆಲುವು
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಪುಣೇರಿ ಪಲ್ಟನ್ ಮಣಿಸಿದೆ. ಯು ಮುಂಬಾ ವಿರುದ್ಧ 35-28 ಅಂಕಗಳ ಅಂತರದಲ್ಲಿ ಪುಣೇರಿ ಪಲ್ಟನ್ ಗೆಲುವು ಸಾಧಿಸಿದೆ. ಪುಣೇರಿ ಪಲ್ಟನ್ ಅದ್ಭುತ ಪ್ರದರ್ಶನ ಕಂಡು ಮಂಕಾದ ಯು ಮುಂಬಾ ಅಂಕಗಳ ಬೇಟೆಯಲ್ಲಿ ಹಿಂದೆಯುಳಿತು. ಪುಣೇರಿ ಜಯದ ದಡ ಸೇರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications